ಬೆಳೆ ಪರಿಹಾರ ನೀಡಲು ಸರ್ಕಾರ ಮುಂದಾಗಲಿ

ಕನಕಗಿರಿಯಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶಿರಸ್ತೇದಾರ್ ಸುನೀಲ್‌ಕುಮಾರಗೆ ಮನವಿ ಸಲ್ಲಿಸಲಾಯಿತು. ವಿಜಯನಗರ ಜಿಲ್ಲಾಧ್ಯಕ್ಷ ಬಿ.ಎಂ.ಹುಲಗಪ್ಪ, ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ, ಪ್ರಮುಖರಾದ ಕನಕಪ್ಪ ತಳವಾರ್, ಸುರೇಶ್ ನಾಯಕ್ ಇತರರಿದ್ದರು.
ಕನಕಗಿರಿಯಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶಿರಸ್ತೇದಾರ್ ಸುನೀಲ್‌ಕುಮಾರಗೆ ಮನವಿ ಸಲ್ಲಿಸಲಾಯಿತು. ವಿಜಯನಗರ ಜಿಲ್ಲಾಧ್ಯಕ್ಷ ಬಿ.ಎಂ.ಹುಲಗಪ್ಪ, ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ, ಪ್ರಮುಖರಾದ ಕನಕಪ್ಪ ತಳವಾರ್, ಸುರೇಶ್ ನಾಯಕ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿರಸ್ತೇದಾರ್ ಸುನೀಲ್‌ಕುಮಾರಗೆ ಮನವಿ
ಕನಕಗಿರಿ: ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಒಣಬೇಸಾಯವನ್ನೇ ಆಧರಿಸಿದ ಕನಕಗಿರಿ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿ ಬೆಳೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಶಿರಸ್ತೇದಾರ್ ಸುನೀಲ್‌ಕುಮಾರಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಕಕ ವಿಭಾಗೀಯ ಅಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ಮಳೆ ಇಲ್ಲದೆ ಬೆಳೆ ಸಂಪೂರ್ಣ ನಾಶವಾಗಿದ್ದು, ಬರಪೀಡಿತ ತಾಲೂಕು ಎಂದು ಶೀಘ್ರ ಘೋಷಿಸಿ ಪ್ರತಿ ಎಕರೆಗೆ 50 ಸಾವಿರ ರೂ. ಬೆಳೆ ಪರಿಹಾರ ನೀಡಬೇಕು. ಕೆರೆ ತುಂಬಿಸುವ ಕೃಷ್ಣ ಬಿ.ಸ್ಕೀಂ ಯೋಜನೆ ಅನುಷ್ಠಾನವಾಗಿದ್ದು, ಲೈನ್ ಬದಲಾವಣೆ ಮಾಡಿ ಪ್ಲಾಸ್ಟಿಕ್ ಪೈಪ್ ಹಾಕಲಾಗಿದೆ. ಕಬ್ಬಿಣದ ಪೈಪ್‌ಗೆ ಬದಲಾಯಿಸಬೇಕು ಎಂದರು.
ಸಂಘದ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ಬರದಿಂದ ನರಳುತ್ತಿರುವ ರೈತರ ಸಾಲ ಮನ್ನಾ ಮಾಡಬೇಕು. ಕೊಪ್ಪಳ ಜಿಲ್ಲೆಯಲ್ಲಿ ರೈತರ ಜಮೀನಿನಲ್ಲಿ ವಿಂಡ್‌ಪವರ್, 720 ಕೆವಿ ಮತ್ತು 400 ಕೆವಿ ಟವರ್ ಹಾಕಲಾಗುತ್ತಿದೆ. ಪ್ರತಿ ಟವರ್‌ಗೆ 2 ಕೋಟಿ ರೂ. ವಿಮಾ ಬಾಂಡ್ ಮಾಡಬೇಕು. ತುಂಗಭದ್ರಾ ಅಣೆಕಟ್ಟಿನ 30 ಟಿಎಂಸಿ ಹೂಳು ತೆಗೆಯಬೇಕು ಎಂದು ಆಗ್ರಹಿಸಿದರು.
ವಿಜಯನಗರ ಜಿಲ್ಲಾಧ್ಯಕ್ಷ ಬಿ.ಎಂ.ಹುಲಗಪ್ಪ, ಕಂಪ್ಲಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ, ಪ್ರಮುಖರಾದ ಕನಕಪ್ಪ ತಳವಾರ್, ಸುರೇಶ ನಾಯಕ, ಗಂಗಪ್ಪ ಯಾದವ, ಸಂತೋಷ್ ಕನ್ನಾಳ, ಪವನ್ ಭೋವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net