ಸಾಂಸ್ಕೃತಿಕ ಪರಂಪರೆ ಮುಂದುವರಿಯಲಿ

ಗಂಗಾವತಿ ಗಣೇಶ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಜಿ ಸಚಿವ ಎಂ. ಮಲ್ಲಿಕಾರ್ಜುನ ನಾಗಪ್ಪ ಗುರುವಾರ ಉದ್ಘಾಟಿಸಿದರು. ದೇವಾಲಯ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ವಿವಿಧ ಸಮಾಜದ ಮುಖಂಡರಾದ ಅಮರಜ್ಯೋತಿ ನರಸಪ್ಪ, ಜೋಗದ ಹನುಮಂತಪ್ಪ ನಾಯಕ ಇತರರಿದ್ದರು.

Published on
ಗಂಗಾವತಿ: ನಗರದ ಗ್ರಾಮದ ದೇವತೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಗಣೇಶ ವೃತ್ತದಲ್ಲಿ ಜೆಎನ್‌ಎನ್ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ವಿಐಪಿ ಮೆಲೋಡಿಸ್, ಶ್ರೀ ಅಂಜನಾದ್ರಿ ಹೆಜ್ಜೆಗೆಜ್ಜೆ ಜನ ಸೇವಾ ಕಲಾ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಲಾವಿದ ಪಂಪಾಪತಿ ಇಂಗಳಗಿ ತಂಡದಿಂದ ಭಕ್ತಿಗೀತೆಗಳ ಗಾಯನ, ಎಸ್‌ಎಸ್‌ಕೆ ಸಮಾಜದ ಮಹಿಳಾ ಮಂಡಳಿ ಮತ್ತು ಕಂಪ್ಲಿಯ ಅಶ್ವಿನಿ ಭರತ ನಾಟ್ಯ ಶಾಲೆ ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ವಿವಿಧ ಪ್ರಕಾರ ನೃತ್ಯ ಪ್ರದರ್ಶನ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಂ.ಮಲ್ಲಿಕಾರ್ಜುನನಾಗಪ್ಪ ಮಾತನಾಡಿ, ಸಾಂಸ್ಕೃತಿಕ ಪರಂಪರೆ ಮುಂದುವರಿಸುವ ಜವಾಬ್ದಾರಿ ಯುವಕರು ಮತ್ತು ಸಂಘಟನೆಗಳ ಮೇಲಿದೆ ಎಂದರು. ದೇವಾಲಯ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ, ವಿವಿಧ ಸಮಾಜದ ಮುಖಂಡರಾದ ಅಮರಜ್ಯೋತಿ ನರಸಪ್ಪ, ಜೋಗದ ಹನುಮಂತಪ್ಪ ನಾಯಕ, ವೆಂಕಟೇಶ ಅಮರಜ್ಯೋತಿ, ಶಿವಕುಮಾರಗೌಡ, ಸೈಯದ್ ಅಲಿ, ಅನ್ನಪೂರ್ಣ ಸಿಂಗ್, ಗೀತಾ ವಿಕ್ರಂ, ರಘುನಾಥ ಪವಾರ್, ಕಲಾವಿದ ನಾಗರಾಜ್ ಇಂಗಳಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net