ಸಮುದಾಯದವರು ಸಂಘಟಿತರಾಗಲಿ

ಗಂಗಾವತಿಯ ಕನಕಗಿರಿ ರಸ್ತೆಯ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್ ಇತರರಿದ್ದರು.
ಗಂಗಾವತಿಯ ಕನಕಗಿರಿ ರಸ್ತೆಯ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಘಟಿತ

ಸಮುದಾಯದವರು ಸಂಘಟಿತರಾಗಲಿ

ಗಂಗಾವತಿ: ನಗರದ ಕನಕಗಿರಿ ರಸ್ತೆಯ ಶ್ರೀ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ತಾಲೂಕಾಡಳಿತ, ರಡ್ಡಿ ಸಮಾಜ ತಾಲೂಕು ಘಟಕ ಮತ್ತು ರಡ್ಡಿ ಯುವಜನ ಸಂಘದಿಂದ ಭಾನುವಾರ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ಮಾತನಾಡಿ, ಮಲ್ಲಮ್ಮನ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು.
ಸಮಾಜ ಸಂಘಟಿತ ಆಗಬೇಕಿದ್ದು, ಕ್ರೀಯಾಶೀಲ ಚಟುವಟಿಕೆಗಳನ್ನು ಆಯೋಜಿಸಬೇಕಿದೆ. ರಸ್ತೆ ಮಧ್ಯದಲ್ಲಿರುವ ವೃತ್ತವನ್ನು ರಸ್ತೆ ಬದಿಯಲ್ಲಿ ಸ್ಥಳಾಂತರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದರು.
ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ಗಿರೇಗೌಡ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ್, ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡಗೌಡರ್, ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಪ್ರಕಾಶ ನಾಯ್ಕ, ಸಮಾಜದ ತಾಲೂಕಾಧ್ಯಕ್ಷ ಆರ್.ಪಿ.ರಡ್ಡಿ, ಯುವಜನ ಸಂಘದ ತಾಲೂಕಾಧ್ಯಕ್ಷ ಉಮೇಶ ಸಿಂಗನಾಳ್, ಪ್ರಮುಖರಾದ ಶ್ರೀಧರ ಕೇಸರಹಟ್ಟಿ, ಲಿಂಗನಗೌಡ ಹೇರೂರು, ವಿಶ್ವನಾಥ ಮಾಲಿ ಪಾಟೀಲ್, ಸುರೇಶ ಸಿಂಗನಾಳ್, ಜಗದೀಶಪ್ಪ ಸಿಂಗನಾಳ್, ಶಂಕರಗೌಡ, ಮನೋಹರಗೌಡ ಹೇರೂರು ಇತರರಿದ್ದರು.
ತಾಲೂಕಾಡಳಿತ ಸೌಧದ ಕಚೇರಿ: ನಗರದ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ಕಂದಾಯ ಇಲಾಖೆಯಿಂದ ಭಾನುವಾರ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯತಿ ಆಚರಿಸಲಾಯಿತು. ಗ್ರೇಡ್-2 ತಹಸೀಲ್ದಾರ್ ಮಹಾಂತಗೌಡಗೌಡರ್, ರಡ್ಡಿ ಸಮಾಜದ ಚನ್ನಬಸವ ಜೇಕಿನ್, ಜಗದೀಶಪ್ಪ ಸಿಂಗನಾಳ್, ಮಹಾಂತೇಶ, ಆರ್.ಪಿ.ರಡ್ಡಿ, ಬಸವಂತರಡ್ಡಿ, ಉಮೇಶ ಸಿಂಗನಾಳ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net