ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಬಿಡಲಿ

ಹನುಮಸಾಗರ ಸಮೀಪದ ಹೂಲಗೇರಾ ಗ್ರಾಮದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಹನುಮಸಾಗರ ಸಮೀಪದ ಹೂಲಗೇರಾ ಗ್ರಾಮದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಬಸ್ ತಡೆದು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಹೂಲಗೇರಾ ಗ್ರಾಮದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
  • ಹನುಮಸಾಗರ ಹೂಲಗೇರಾ ಬಸ್ ಪ್ರತಿಭಟನೆ
ಹನುಮಸಾಗರ; ಶಾಲಾ-ಕಾಲೇಜು ಸಮಯಕ್ಕೆ ಸರಿಯಾಗಿ ಬಸ್ ಬಿಡಲು ಒತ್ತಾಯಿಸಿ ಹೂಲಗೇರಾ ಗ್ರಾಮದ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಕುಷ್ಟಗಿ ಹಾಗೂ ಇಳಕಲ್ ತಾಲೂಕು ಗಡಿಯಲ್ಲಿರುವ ಹೂಲಗೇರಾ ಗ್ರಾಮದಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಳಕಲ್‌ಗೆ ನಿತ್ಯ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದು, ಸಕಾಲಕ್ಕೆ ಈ ಹಿಂದೆ ಒಂದು ಬಸ್ ಬಿಡಲಾಗುತ್ತಿತ್ತು. ಇತ್ತೀಚೆಗೆ ಮತ್ತೊಂದು ಬಸ್ ಹೆಚ್ಚುವರಿಯಾಗಿ ಬಿಡಲಾಗಿದೆ. ಆದರೆ, ಎರಡು ಬಸ್‌ಗಳಲ್ಲಿಯೂ ನಿಂತುಕೊಳಲು ಸಹ ಜಾಗ ಸಾಕಾಗುವುದಿಲ್ಲ. ಇದರಿಂದಾಗಿ ಬಸ್ ಬಾಗಿಲಿನಲ್ಲಿ ಜೋತು ಬಿದ್ದು ಪ್ರಯಾಣಿಸಬೇಕಾಗಿದೆ. ಮೇಲೆ ಹತ್ತುವಂತೆ ಚಾಲಕ ಹಾಗೂ ನಿರ್ವಾಹಕರು ನಿತ್ಯ ನಮ್ಮೊಂದಿಗೆ ವಾಗ್ವಾದ ಮಾಡುತ್ತಿದ್ದು, ಹತ್ತಲು ಜಾಗವಿರುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬಸ್ ಬಿಡುವಂತೆ ಇಳಕಲ್ ಡಿಪೋ ವ್ಯವಸ್ಥಾಪಕರನ್ನು ಕೇಳಿದರೆ ನಿಮ್ಮ ತಾಲೂಕು ಕುಷ್ಟಗಿ, ಅಲ್ಲಿ ಹೋಗಿ ಕೇಳಿ ಎನ್ನುತ್ತಾರೆ. ನಾವು ಇಳಕಲ್ ಡಿಪೋದಲ್ಲಿ ವಿದ್ಯಾರ್ಥಿಗಳ ಬಸ್ ಪಾಸ್ ಮಾಡಿಸಿದ್ದರಿಂದ ಇಲ್ಲಿಂದಲೇ ಬಸ್ ಬಿಡಲು ಕೇಳಿದರೆ ಅಲ್ಲಿ ಹೋಗಿ ಕೇಳಿ ಎಂದು ಇಳಕಲ್ ಡಿಪೋದವರು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಇದರಿಂದಾಗಿ ನಿತ್ಯ ಬಸ್ ಬಾಗಿಲಿನಲ್ಲಿ ಜೋತು ಬಿದ್ದು ಕಾಲೇಜಿಗೆ ಹೋಗಬೇಕಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net