ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮುಂಗಾರು ಆಂದೋಲನ ಕಾರ್ಯಕ್ರಮವನ್ನು ಕೃಷಿಕ ಸವಾಜದ ಜಿಲ್ಲಾ ಅಧ್ಯಕ್ಷ ಶರಣೇಗೌಡ ವಾಲಿ ಪಾಟೀಲ್ ಉದ್ಘಾಟಿಸಿದರು. ಉಪಾಧ್ಯಕ್ಷ ವಿರೂಪಣ್ಣ ನವೋದಯ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ, ಕಷಿ ವಿಜ್ಞಾನಗಳ ವಿವಿ ವ್ಯವಸ್ಥಾಪನ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ ಇತರರಿದ್ದರು.
ಕೃಷಿಕ ಸವಾಜದ ಜಿಲ್ಲಾ ಅಧ್ಯಕ್ಷ ಶರಣೇಗೌಡ ವಾಲಿ ಪಾಟೀಲ್ ಸಲಹೆ
ಮುಂಗಾರು ಆಂದೋಲನ
ಕೊಪ್ಪಳ: ಗೊಬ್ಬರ ಕೊರತೆ ಹಾಗೂ ಬದಲಾಗುತ್ತಿರುವ ಕೃಷಿ ಪದ್ಧತಿಯಲ್ಲಿ ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು ಎಂದು ಕೃಷಿಕ ಸವಾಜದ ಜಿಲ್ಲಾ ಅಧ್ಯಕ್ಷ ಶರಣೇಗೌಡ ವಾಲಿ ಪಾಟೀಲ್ ಹೇಳಿದರು.
ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮುಂಗಾರು ಆಂದೋಲನ ಕಾರ್ಯಕ್ರಮದಲ್ಲಿ ವಾತನಾಡಿದರು. ಕೃಷಿ ವಿಸ್ತರಣಾ ಕೇಂದ್ರದ ವಿಜ್ಞಾನಿಗಳು, ಕೃಷಿ ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ರೈತರಿಗೆ ಸೂಕ್ತ ವಾರ್ಗದರ್ಶನ ನೀಡಬೇಕು. ರೈತರು ಲಭ್ಯವಿರುವ ತಾಂತ್ರಿಕ ವಾಹಿತಿ ಸದ್ಬಕೆ ಮಾಡಿಕೊಳ್ಳಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ ವಾತನಾಡಿ, ಉತ್ತಮ ಗುಣಮಟ್ಟದ ಬೀಜಗಳ ಬಳಕೆ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕು ಎಂದರು. ಕಷಿ ವಿಜ್ಞಾನಗಳ ವಿವಿ ವ್ಯವಸ್ಥಾಪನ ಮಂಡಳಿ ಸದಸ್ಯ ತಿಮ್ಮಣ್ಣ ಚವಡಿ ಮಾತನಾಡಿ, ರೈತರು ವಿಜ್ಞಾನಿಗಳ ವಾರ್ಗದರ್ಶನದಲ್ಲಿ ಕೃಷಿ ಕಾರ್ಯ ಕೈಗೊಳ್ಳಬೇಕು. ಹೊಲದಿಂದ ಕೊಚ್ಚಿ ಹೋಗುವ ಮಣ್ಣನ್ನು ಮರಳಿ ತಂದು ಭೂಮಿಯ ಫಲವತ್ತತೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕೃಷಿಕ ಸವಾಜದ ಜಿಲ್ಲಾ ಉಪಾಧ್ಯಕ್ಷ ವಿರೂಪಣ್ಣ ನವೋದಯ, ಎ್ಪಿಒ ರಾಜ್ಯ ನಿರ್ದೇಶಕ ಶಿವರಾಮ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಡಾ.ಬದರಿ, ಪ್ರಮುಖರಾದ ಡಾ.ರಾವೇಂದ್ರ, ಡಾ.ಅವಿನಾಶ, ಶಿವಶಂಕರ್ ಕುರೇಶಿ, ಶ್ರೀಪಾದ ಮುರುಡಿ, ಲಿಂಗಪ್ಪ, ಶ್ರೀನಿವಾಸ ಜಾಲಿಹಾಳ್, ಜಡೆ ಸ್ವಾಮಿ, ಬಸವರಾಜ ಗೊಂಡಬಾಳ ಇತರರಿದ್ದರು.