ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಲಿ

ಭಾಗ್ಯನಗರದ ಜ್ಞಾನ ಬಂಧು ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ನಾಯಕರ ಪದಗ್ರಹಣ ಕಾರ್ಯಕ್ರಮವನ್ನು ಜ್ಞಾನ ಬಂಧು ಶಿಕ್ಷಣ ಸಂಸ್ಥೆ ಅಧ್ಯಕ್ಷ ದಾನಪ್ಪ ಕವಲೂರು ಉದ್ಘಾಟಿಸಿದರು. ಪಪಂ ಸದಸ್ಯೆ ಪಾಲಾಕ್ಷಮ್ಮ ಕವಲೂರು, ಪ್ರಾಚಾರ್ಯ ಜೆ.ರವೀಂದ್ರ, ಮುಖ್ಯಶಿಕ್ಷಕಿ ಎಸ್.ಎಸ್.ಜ್ಯೋತಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜ್ಞಾನ ಬಂಧು ಶಿಕ್ಷಣ ಸಂಸ್ಥೆ ಅಧ್ಯಕ್ಷ ದಾನಪ್ಪ ಕವಲೂರು ಸಲಹೆ
  • ವಿದ್ಯಾರ್ಥಿ ನಾಯಕರ ಪದಗ್ರಹಣ
ಕೊಪ್ಪಳ: ಶಾಲಾ ಹಂತದಲ್ಲೇ ಮಕ್ಕಳು ನಾಯಕತ್ವ ಗುಣ ಬೆಳೆಸಿಕೊಂಡು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರೆ ಮುಂದಿನ ದಿನಗಳಲ್ಲಿ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಜ್ಞಾನ ಬಂಧು ಶಿಕ್ಷಣ ಸಂಸ್ಥೆ ಅಧ್ಯಕ್ಷ ದಾನಪ್ಪ ಕವಲೂರು ಹೇಳಿದರು.
ಭಾಗ್ಯನಗರದ ಜ್ಞಾನ ಬಂಧು ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ ನಾಯಕರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಶಾಲೆಯ ಶಿಸ್ತು, ಸ್ವಚ್ಛತೆ, ಶೈಕ್ಷಣಿಕ ಪ್ರಗತಿ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಮಾದರಿಯಾಗಿ ಕಾರ್ಯನಿರ್ವಹಿಸಬೇಕು. ತಂಡದ ನಾಯಕರು ಪ್ರೇರಣೆಯಾಗುವ ರೀತಿಯಲ್ಲಿ ಜವಾಬ್ದಾರಿ ನಿರ್ವಹಿಸಬೇಕು ಎಂದರು. ಶಾಲೆ ವಿವಿಧ ತಂಡಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ನಂತರ ವಿದ್ಯಾರ್ಥಿ ನಾಯಕರು ಹಾಗೂ ಪದಾಧಿಕಾರಿಗಳಿಗೆ ಪದಗ್ರಹಣ ಬೋಧಿಸಲಾಯಿತು.
ಪಪಂ ಸದಸ್ಯೆ ಪಾಲಾಕ್ಷಮ್ಮ ಕವಲೂರು, ಕಾಲೇಜಿನ ಪ್ರಾಚಾರ್ಯ ಜೆ.ರವೀಂದ್ರ, ಮುಖ್ಯಶಿಕ್ಷಕಿ ಎಸ್.ಎಸ್.ಜ್ಯೋತಿ, ಉಪಪ್ರಾಚಾರ್ಯ ಮಂಜುನಾಥ ಚಿತ್ರಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net