ಸಣ್ಣ ಸಮುದಾಯಗಳು ಮುನ್ನೆಲೆಗೆ ಬರಲಿ

ಹನುಮಸಾಗರದಲ್ಲಿ ಮಡಿವಾಳ ಮಾಚಿದೇವ ಹಾಗೂ ಹೂಗಾರ ಮಾದಯ್ಯ ಸಮುದಾಯ ಭವನಗಳಿಗೆ ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಭೂಮಿಪೂಜೆ ನೆರವೇರಿಸಿದರು. ಮಡಿವಾಳ ಸಮುದಾಯದ ರಾಜ್ಯ ಉಪಾಧ್ಯಕ್ಷ ದುರಗೇಶ ಮಡಿವಾಳರ, ತಾಲೂಕು ಅಧ್ಯಕ್ಷ ಅಶೋಕ ಮಡಿವಾಳರ, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಬಸವರಾಜ ಹಳ್ಳೂರ, ಗ್ರಾಪಂ ಮಾಜಿ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಕೆಪಿಎಸ್ ಶಾಲೆ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಅನಿಸಿಕೆ
  • ಕಾಮಗಾರಿಗೆ ಭೂಮಿಪೂಜೆ
ಹನುಮಸಾಗರ: ಸಣ್ಣ ಸಮುದಾಯಗಳ ಅಭಿವೃದ್ಧಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಹೇಳಿದರು.
ಮಡಿವಾಳ ಮಾಚಿದೇವ ಹಾಗೂ ಹೂಗಾರ ಮಾದಯ್ಯ ಸಮುದಾಯ ಭವನಗಳಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (ಸಿಎಂಐಡಿಪಿ) ಅಡಿ ಕೆಆರ್‌ಐಡಿಎಲ್ನಿಂದ ತಲಾ 10 ಲಕ್ಷ ರೂ. ಅನುದಾನದಲ್ಲಿ ಹೂಗಾರ ಮಾದಯ್ಯ ಹಾಗೂ ಮಡಿವಾಳ ಮಾಚಿದೇವರ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ. ಭವನಗಳ ಕಾಮಗಾರಿ ಗುಣಮಟ್ಟದಲ್ಲಿರಬೇಕು.
ಸಮುದಾಯದವರು ಕಾಮಗಾರಿ ನಿರ್ವಹಣೆ ವೇಳೆ ಮುತುವರ್ಜಿ ವಹಿಸಬೇಕು. ಸಣ್ಣ ಸಮುದಾಯಗಳು ಮುನ್ನೆಲೆಗೆ ಬರಬೇಕು ಎಂದು ಸರ್ಕಾರ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಜಾರಿಗೊಳಿಸುತ್ತಿದೆ. ಭವನಗಳು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮುದಾಯ ಚಟುವಟಿಕೆಗಳಿಗೆ ಅನುಕೂಲವಾಗಲಿವೆ ಎಂದರು.
ಮಡಿವಾಳ ಸಮುದಾಯದ ರಾಜ್ಯ ಉಪಾಧ್ಯಕ್ಷ ದುರಗೇಶ ಮಡಿವಾಳರ, ತಾಲೂಕು ಅಧ್ಯಕ್ಷ ಅಶೋಕ ಮಡಿವಾಳರ, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಬಸವರಾಜ ಹಳ್ಳೂರ, ಗ್ರಾಪಂ ಮಾಜಿ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಕೆಪಿಎಸ್ ಶಾಲೆ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ, ಪ್ರಮುಖರಾದ ಸುಚಪ್ಪ ದೇವರಮನಿ, ಸಕ್ರಪ್ಪ ಬಿಂಗಿ, ತಿಮ್ಮನಗೌಡ ಪೊಲೀಸ್ ಪಾಟೀಲ್, ಮಾರುತಿಸಾ ರಂಗ್ರೇಜ, ನಾಗರಾಜ ಹಕ್ಕಿ, ಯಮನೂರ ಮಡಿವಾಳರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net