ಆರ್ಥಿಕ ವೃದ್ಧಿಗೆ ಸಂಘಟನೆಗಳು ನೆರವಾಗಲಿ

ಗಂಗಾವತಿ ರೋಟರಿ ಕ್ಲಬ್ ಕಚೇರಿಯಲ್ಲಿ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಉಚಿತವಾಗಿ ವಿತರಿಸಲಾಯಿತು. ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್, ರೋಟರಿ ಕ್ಲಬ್ ತಾಲೂಕಾಧ್ಯಕ್ಷ ಜಗದೀಶ, ಹಿರಿಯ ಸದಸ್ಯರಾದ ಟಿ.ಆಂಜನೇಯ, ವಾಸುಕೊಳಗದ್, ಜೆ.ನಾಗರಾಜ್ ಇತರರಿದ್ದರು.
ಗಂಗಾವತಿ ರೋಟರಿ ಕ್ಲಬ್ ಕಚೇರಿಯಲ್ಲಿ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಉಚಿತವಾಗಿ ವಿತರಿಸಲಾಯಿತು. ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್, ರೋಟರಿ ಕ್ಲಬ್ ತಾಲೂಕಾಧ್ಯಕ್ಷ ಜಗದೀಶ, ಹಿರಿಯ ಸದಸ್ಯರಾದ ಟಿ.ಆಂಜನೇಯ, ವಾಸುಕೊಳಗದ್, ಜೆ.ನಾಗರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಸಲಹೆ
  • ಹೊಲಿಗೆ ಯಂತ್ರ ಉಚಿತ ವಿತರಣೆ
ಗಂಗಾವತಿ: ಮಹಿಳಾ ಸಬಲೀಕರಣಕ್ಕೆ ಪೂರಕ ಯೋಜನೆಗಳನ್ನು ಜಾರಿಗೊಳಿಸಬೇಕಿದ್ದು, ಆರ್ಥಿಕ ವೃದ್ಧಿಗೆ ಸಂಘಟನೆಗಳು ನೆರವಾಗಬೇಕು ಎಂದು ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಹೇಳಿದರು.
ನಗರದ ರೋಟರಿ ಕ್ಲಬ್ ಕಚೇರಿಯಲ್ಲಿ ರೋಟರಿ ಕ್ಲಬ್ ತಾಲೂಕು ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ ಉಚಿತ ವಿತರಣೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವದಲ್ಲಿ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ರೋಟರಿ ಸಂಸ್ಥೆ ಬಡ ಮತ್ತು ಶೋಷಿತರ ಪರ ಯೋಜನೆಗಳನ್ನು ರೂಪಿಸುತ್ತಿದೆ.
ಮಕ್ಕಳಿಗೆ ಪ್ರೋತ್ಸಾಹ, ಸಹಕಾರ, ಮಾರ್ಗದರ್ಶನ ಮತ್ತು ಮನೋಸ್ಥೆರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಪೂರಕವಾಗಿದೆ ಎಂದರು. ರೋಟರಿ ಹಿರಿಯ ಸದಸ್ಯ ಟಿ.ಆಂಜನೇಯ ಮಾತನಾಡಿ, ಗಂಗಾವತಿ ರೋಟರಿ ಸೆಂಟ್ರಲ್ ಸಂಸ್ಥೆ 26ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಸಮುದಾಯ, ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡಿದೆ ಎಂದು ತಿಳಿಸಿದರು.
ತಾಲೂಕಾಧ್ಯಕ್ಷ ಜಗದೀಶ, ಹಿರಿಯ ಸದಸ್ಯರಾದ ವಾಸುಕೊಳಗದ್, ಜೆ.ನಾಗರಾಜ, ಶಿವಕುಮಾರ, ಶ್ರೀಧರ ನಾಯಕ, ಪ್ರಕಾಶ ಛೋಪ್ರಾ, ಉಗಮರಾಜ ಬಂಬ, ಎಚ್.ಎಂ.ಮಂಜುನಾಥ, ಸುರೇಶ್ ಬಂಬ್, ದಿಲೀಪ್ ಮೂಥಾ, ಎಂ.ಗುರುರಾಜ, ರಾಮ ಪ್ರಸಾದ, ಡಾ.ಬಿ.ಶ್ರೀಕಾಂತ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net