ಮಕ್ಕಳಿಗೆ ತಾಯಂದಿರು ಸಂಸ್ಕಾರ ಕಲಿಸಲಿ

ಕನಕಗಿರಿಯಲ್ಲಿ ಭಾನುವಾರ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಪಪಂ ಮಾಜಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಉದ್ಘಾಟಿಸಿದರು. ಕೆಪಿಎಸ್ ಕಾರಟಗಿಯ ಸಹ ಶಿಕ್ಷಕಿ ಅನ್ನಪೂರ್ಣ ಸಜ್ಜನ್, ಕ.ಕ. ಸಮನ್ವಯಾಧಿಕಾರಿ ಸುಧಾ ಇತರರು ಇದ್ದರು.
ಕನಕಗಿರಿಯಲ್ಲಿ ಭಾನುವಾರ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಪಪಂ ಮಾಜಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ ಉದ್ಘಾಟಿಸಿದರು. ಕೆಪಿಎಸ್ ಕಾರಟಗಿಯ ಸಹ ಶಿಕ್ಷಕಿ ಅನ್ನಪೂರ್ಣ ಸಜ್ಜನ್, ಕ.ಕ. ಸಮನ್ವಯಾಧಿಕಾರಿ ಸುಧಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕಿ
  • ಅನ್ನಪೂರ್ಣ
  • ಸಲಹೆ
ಕನಕಗಿರಿ: ಪಾಲಕರು ಹಾಗೂ ಮಕ್ಕಳ ನಡುವೆ ಭಾವನಾತ್ಮಕ ಸಂಬಂಧಗಳ ಕೊರತೆಯಿಂದಾಗಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಕೆಪಿಎಸ್ ಕಾರಟಗಿಯ ಸಹ ಶಿಕ್ಷಕಿ ಅನ್ನಪೂರ್ಣ ಸಜ್ಜನ್ ಬೇಸರ ವ್ಯಕ್ತಪಡಿಸಿದರು.
ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ಭಾನುವಾರ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸುವಲ್ಲಿ ಪಾಲಕರ ಪಾತ್ರ ವಿಷಯದ ಕುರಿತು ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು.
ಶಾಲೆಗಳು ಮಕ್ಕಳಿಗೆ ಶಿಕ್ಷಣ ನೀಡಿದರೆ, ಮನೆಯಿಂದ ಸಂಸ್ಕಾರ ಹಾಗೂ ಬದುಕು ಗೊತ್ತಾಗುತ್ತದೆ. ಮಗುವಿನ ಬೆಳವಣಿಗೆಯಲ್ಲಿ ತಾಯಿ ಕರ್ತವ್ಯ ಶ್ರೇಷ್ಠ. ಮಕ್ಕಳೊಂದಿಗೆ ಹೆಚ್ಚು ಕಾಲ ಬೆರೆತರೆ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ. ಮೊಬೈಲ್ ಹಾಗೂ ಧಾರಾವಾಹಿಗಳಿಂದ ದೂರವಿದ್ದು, ಮಕ್ಕಳಿಗೆ ಹತ್ತಿರವಾಗಬೇಕು.
ನಮ್ಮ ಮಕ್ಕಳೇ ನಮಗೆ ಭವಿಷ್ಯದಲ್ಲಿ ಸಮಸ್ಯೆಯಾಗಬಾರದು. ಅದಕ್ಕಾಗಿ ಮಕ್ಕಳಿಗೆ ಚಿಕ್ಕವರಿಂದಲೇ ಸಹಾಯ ಮಾಡುವ ಗುಣ, ಹಿರಿಯರಿಗೆ ಗೌರವಿಸುವ ಗುಣ ಕಲಿಸಬೇಕು ಎಂದರು.
ಆರ್ಥಿಕ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಕುರಿತು ಕೊಪ್ಪಳ ವಿವಿ ಉಪನ್ಯಾಸಕಿ ಡಾ. ಗೀತಾ ಪಾಟೀಲ್ ಮಾತನಾಡಿ, ಸ್ವಸಹಾಯ ಸಂಘಗಳಲ್ಲಿ ಸಾಲ ಪಡೆದ ಮಹಿಳೆಯರು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಉಳಿತಾಯ ಹಣವನ್ನು ಯೋಚನೆಯಿಂದ ಬಳಸಬೇಕು. ಇತರರಿಗೆ ಮಾದರಿಯಾಗುವಂತೆ ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಇದೇ ವೇಳೆ ಸೂಲಗಿತ್ತಿ ದುರಗಮ್ಮ, ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಿದ ದುರುಗಮ್ಮ ಹಾಗೂ ಸಾಧಕಿ ಈರಮ್ಮ ಅವರನ್ನು ಸನ್ಮಾನಿಸಲಾಯಿತು. ಕ.ಕ. ಸಮನ್ವಯಾಧಿಕಾರಿ ಸುಧಾ, ಪಪಂ ಮಾಜಿ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಪ್ರಕಾಶರಾವ್, ಕ್ಷೇತ್ರ ಯೋಜನಾಧಿಕಾರಿ ನಿಂಗಪ್ಪ ಡಿ. ಅಗಸರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net