ಅಂಗಡಿ ಆರಂಭಿಸಲು ಅವಕಾಶ ನೀಡಲಿ

ಕುಕನೂರು ಪಪಂ ಕಚೇರಿ ನೌಕರ ರಮೇಶ ಅಕ್ಕಿ ಅವರಿಗೆ ತೆರವುಗೊಂಡ ಅಂಗಡಿಕಾರರು ಮನವಿ ಸಲ್ಲಿಸಿದರು. ಪ್ರಮುಖರಾದ ಪ್ರವೀಣದಾಸ, ಜೆ.ಕೆ.ಟೈಲರ್, ರಾಜಾಸಾಬ್, ಬಸವರೆಡ್ಡಿ, ಪವಿತ್ರಾ, ಪ್ರವೀಣ, ಸಿಕಂದರ್. ನವೀನ, ಸಂಗಯ್ಯ ದ್ಯಾಂಪೂರು, ಹುಸೇನಸಾಬ್, ಮಹೆಬೂಬಸಾಬ್ ಗುಡಿಹಿಂದಲ್, ಸುಭಾಷ ಸದರಿ, ವಿರಾಜ ಇತರರಿದ್ದರು.

Published on
ಕುಕನೂರು: ಪಟ್ಟಣದ ಹಳೇ ನಾಡ ಕಚೇರಿ ಮುಂಭಾಗದ ಅಂಗಡಿಗಳನ್ನು ಇತ್ತೀಚೆಗೆ ತೆರೆವುಗೊಳಿಸಲಾಗಿದ್ದು, ಅದೇ ಜಾಗದಲ್ಲಿ ಚಿಕ್ಕದಾಗಿ ಅಂಗಡಿ ಆರಂಭಿಸಲು ಅವಕಾಶ ಮಾಡಿಕೊಡಬೇಕು ಎಂದು ತೆರವುಗೊಂಡ ಅಂಗಡಿಕಾರರು ಪಪಂ ನೌಕರ ರಮೇಶ ಅಕ್ಕಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ವ್ಯಾಪಾರಿ ಈಶಯ್ಯ ಶಿರೂರಮಠ ಮಾತನಾಡಿ, ಪಪಂ ವ್ಯಾಪ್ತಿಯಲ್ಲಿ ಬರುವ ಕುಕನೂರು-ಯಲಬುರ್ಗಾ ರಸ್ತೆಯಲ್ಲಿ ಹಳೇ ನಾಡ ಕಾರ್ಯಾಲಯ ಮುಂಭಾಗದಲ್ಲಿ ಹಲವು ವರ್ಷಗಳಿಂದ 21ಅಂಗಡಿಕಾರರು ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ. ಆದರೆ ನಾಲ್ಕೈದು ದಿನಗಳ ಹಿಂದೆ ಅಂಗಡಿಗಳ ತೆರವು ಕಾರ್ಯ ನಡೆದಿದೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಪಪಂ ಅಧಿಕಾರಿಗಳ ಮಾತಿಗೆ ಮಣಿದು ನಾವು ಅಂಗಡಿ ತೆರವುಗೊಳಿಸಿದ್ದೇವೆ. ಅಂಗಡಿ ತೆರವು ಕಾರ್ಯ ಆಗಿದ್ದರಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net