ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌವಲಗಿ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆ ಕುರಿತಂತೆ ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು. ಸಿಪಿಐ ಯಶವಂತ ಬಿಸನಳ್ಳಿ, ಕುಷ್ಟಗಿ ವಕೀಲರ ಸಂಘದ ಅಧ್ಯಕ್ಷ ಎಚ್.ಆರ್.ನಾಯಕ್, ಸಹಾಯಕ ಸರ್ಕಾರಿ ಅಭಿಯೋಜಕರಾದ ಎಲ್. ರಾಯನಗೌಡ, ಇಂದಿರಾ ಸುಹಾಸಿನಿ, ಅಪರ ಸರ್ಕಾರಿ ವಕೀಲ ಪರಸಪ್ಪ ಗುಜಮಾಗಡಿ, ಪಿಎಸ್‌ಐ ಪುಂಡಲೀಕಪ್ಪ ಇತರರು ಇದ್ದರು. ಕೃಷ್ಣಗಿರಿ ಕಾಲನಿಯ ಸ.ಹಿ.ಪ್ರೌ.ಶಾಲೆಯ ಶಿಕ್ಷಕ ರಾಜಮಹ್ಮದ್ ಕೋಳೂರು ಉಪನ್ಯಾಸ ನೀಡಿದರು.