ಭವಿಷ್ಯದ ವಕೀಲರು ರಕ್ತದಾನದ ಮುಂದಾಳತ್ವ ವಹಿಸಲಿ

ಕೊಪ್ಪಳದ ಡಿಬಿಎಚ್ಪಿಎಸ್​ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ರೆಡ್​ ಕ್ರಾಸ್​ ಸಂಸ್ಥೆಯ ಕಿರಿಯ ಸಂಯೋಜಕ ಡಾ. ಶಿವನಗೌಡ ಪಾಟೀಲ್​. ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಬಸವರಾಜ ಎಸ್​.ಎಂ., ಎಸ್​. ಸೊಪ್ಪಿಮಠ, ಶಾಲಿನಿ ಪಾಟೀಲ್​, ಸೋಮಶೇಖರ್​ ರಾಜು ಯು ಇದ್ದರು.
ಕೊಪ್ಪಳದ ಡಿಬಿಎಚ್ಪಿಎಸ್​ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ರೆಡ್​ ಕ್ರಾಸ್​ ಸಂಸ್ಥೆಯ ಕಿರಿಯ ಸಂಯೋಜಕ ಡಾ. ಶಿವನಗೌಡ ಪಾಟೀಲ್​. ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಬಸವರಾಜ ಎಸ್​.ಎಂ., ಎಸ್​. ಸೊಪ್ಪಿಮಠ, ಶಾಲಿನಿ ಪಾಟೀಲ್​, ಸೋಮಶೇಖರ್​ ರಾಜು ಯು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಶಿವನಗೌಡ ಪಾಟೀಲ್​ ಹೇಳಿಕೆ
  • ವಿಶ್ವ ರಕ್ತದಾನಿಗಳ ದಿನಾಚರಣೆ
ಕೊಪ್ಪಳ : ಯುವ ವಿದ್ಯಾರ್ಥಿಗಳು ಹಾಗೂ ಭವಿಷ್ಯದ ವಕೀಲರು ರಕ್ತದಾನ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜಮುಖಿ ಸೇವೆಗೆ ಮುಂದಾಗಬೇಕು ಎಂದು ಕೊಪ್ಪಳ ರೆಡ್​ ಕ್ರಾಸ್​ ಸಂಸ್ಥೆಯ ಕಿರಿಯ ಸಂಯೋಜಕ ಡಾ. ಶಿವನಗೌಡ ಪಾಟೀಲ್​ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀ ಅಟಲ್​ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನದಿಂದ ಕೇವಲ ಜೀವ ಉಳಿಸುವುದಷ್ಟೇ ಅಲ್ಲ, ದಾನಿಗಳ ಆರೋಗ್ಯಕ್ಕೂ ಪ್ರಯೋಜನವಾಗುತ್ತದೆ. ಕ್ಯಾನ್ಸರ್​ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗುವುದರಿಂದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಕ್ಕೆ ಮುಂದಾಗಬೇಕು. ಕೊಪ್ಪಳ ರೆಡ್​ ಕ್ರಾಸ್​ ಸಂಸ್ಥೆಯು ದೇಶದಲ್ಲಿಯೇ ಅತಿ ಹೆಚ್ಚು ರಕ್ತ ಸಂಗ್ರಹಣೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಈ ಸಾಧನೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಸಹಕಾರ ಮಹತ್ವದ್ದಾಗಿದೆ ಎಂದು ಹೇಳಿದರು.
ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಬಸವರಾಜ ಎಸ್​.ಎಂ. ಮಾತನಾಡಿ, ವಿಶ್ವ ರೆಡ್​ ಕ್ರಾಸ್​ ಸಂಸ್ಥೆಯು ಜಾತಿ, ಧರ್ಮ, ಪಂಥ ಹಾಗೂ ಲಿಂಗ ಭೇದವಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಶಿಬಿರದಲ್ಲಿ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ಎನ್​ಎಸ್​ಎಸ್​ ಮತ್ತು ಯುವ ರೆಡ್​ ಕ್ರಾಸ್​ ಘಟಕದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ಎಸ್​. ಸೊಪ್ಪಿಮಠ, ಶಾಲಿನಿ ಪಾಟೀಲ್​, ಸೋಮಶೇಖರ್​ ರಾಜು ಯು., ಅನುಸೂಯ ಕೆರಿ, ಸಿಬ್ಬಂದಿಗಳಾದ ಮಾರುತಿ ಮೆಟಿಗೇರಿ, ಋತು ಸುರುವೇ, ಪೂರ್ಣಿಮಾ ಪಾಟೀಲ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net