ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಲಿ

ಕುಕನೂರು ಪ್ರವಾಸಿ ಮಂದಿರದಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ, ಭೂಮಿ ಪೂಜೆ ನಿಮಿತ್ತ ಪೂರ್ವಭಾವಿ ಸಭೆ ನಡೆಸಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು. ಪಪಂ ಅಧ್ಯಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಗ್ರೇಡ್-2 ತಹಸೀಲ್ದಾರ್ ಮುರಳಿಧರರಾವ್ ಕುಲಕರ್ಣಿ, ಪಪಂ ಮುಖ್ಯಾಧಿಕಾರಿ ನಾಗೇಶ್, ಪ್ರಮುಖರಾದ ಸತ್ಯನಾರಾಯಣಪ್ಪ ಹರಪನಹಳ್ಳಿ, ಸಿದ್ದಯ್ಯ ಕಳ್ಳಿಮಠ, ಚಂದ್ರಶೇಖರಯ್ಯ ಹಿರೇಮಠ, ಹನುಮಂತಗೌಡ ಚಂಡೂರು ಇತರರಿದ್ದರು.
ಕುಕನೂರು ಪ್ರವಾಸಿ ಮಂದಿರದಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ, ಭೂಮಿ ಪೂಜೆ ನಿಮಿತ್ತ ಪೂರ್ವಭಾವಿ ಸಭೆ ನಡೆಸಿ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಮಾತನಾಡಿದರು. ಪಪಂ ಅಧ್ಯಕ್ಷೆ ಲೀಲಾವತಿ ಮುಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಗ್ರೇಡ್-2 ತಹಸೀಲ್ದಾರ್ ಮುರಳಿಧರರಾವ್ ಕುಲಕರ್ಣಿ, ಪಪಂ ಮುಖ್ಯಾಧಿಕಾರಿ ನಾಗೇಶ್, ಪ್ರಮುಖರಾದ ಸತ್ಯನಾರಾಯಣಪ್ಪ ಹರಪನಹಳ್ಳಿ, ಸಿದ್ದಯ್ಯ ಕಳ್ಳಿಮಠ, ಚಂದ್ರಶೇಖರಯ್ಯ ಹಿರೇಮಠ, ಹನುಮಂತಗೌಡ ಚಂಡೂರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಎಂ
  • ಆರ್ಥಿಕ
  • ಸಲಹೆಗಾರ
ಕುಕನೂರು: ಕ್ಷೇತ್ರದ ಅಭಿವೃದ್ಧಿಗೆ ಉತ್ತಮ ಅವಕಾಶ ದೊರಕಿದ್ದು ಎಲ್ಲರ ಸಹಕಾರ ಅಗತ್ಯ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿವಿಧ ಕಾಮಗಾರಿ ಉದ್ಘಾಟನೆ, ಭೂಮಿ ಪೂಜೆ ನಿಮಿತ್ತ ಪೂರ್ವಭಾವಿ ಸಭೆ ನಡೆಸಿ ಭಾನುವಾರ ಮಾತನಾಡಿದರು.
ಪಟ್ಟಣದಲ್ಲಿ ಶ್ರೀ ಬಸವೇಶ್ವರ, ಡಾ.ಬಿ.ಆರ್.ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ ಮೂರ್ತಿ ನಿರ್ಮಾಣದ ಭೂಮಿ ಪೂಜೆ ಹಾಗೂ ಎಪಿಎಂಸಿಯಲ್ಲಿ ನಿರ್ಮಾಣಗೊಂಡ ಕೊಲ್ಡ್ ಸ್ಟೋರೇಜ್ ಉದ್ಘಾಟನೆ ಕಾರ್ಯಕ್ರಮವನ್ನು ಮೇ 4ರಂದು ನಡೆಸಲಾಗುವುದು. ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಪಟ್ಟಣದ ಪಪಂ ಪಕ್ಕದಲ್ಲಿರುವ ಆಸ್ಪತ್ರೆಯ 2ಗುಂಟೆಯಲ್ಲಿ ಶ್ರೀ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದು, 75ಲಕ್ಷ ರೂ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಅನುಭವ ಮಂಟಪದ ರೀತಿ ಗೋಡೆ ನಿರ್ಮಾಣ ಮಾಡಿ, ವಚನಗಳ ಸಾಲುಗಳು ಕೂಡ ಇರುವಂತೆ ಮಾಡಲಾಗುವುದು. ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗುವುದು. ಡಾ.ಅಂಬೇಡ್ಕರ್ ವೃತ್ತದಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ನಿರ್ಮಾಣ ಮಾಡಲಾಗುವುದು. ಸಂಗೊಳ್ಳಿ ರಾಯಣ್ಣ ಮೂರ್ತಿ ಈ ಮೂರು ಮೂರ್ತಿಗಳು 9 ಅಡಿ ಕಂಚಿನಲ್ಲಿರುತ್ತವೆ. ಈಗಾಗಲೇ ಸೊಲ್ಲಾಪುರದಲ್ಲಿ ಸಿದ್ಧತೆ ಮಾಡಲಾಗುತ್ತಿದ್ದು, ಇನ್ನೂ ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತವೆ ಎಂದರು.
ಯಲಬುರ್ಗಾ ಪಟ್ಟಣದಲ್ಲಿ ಶ್ರೀ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು, 1.15 ಕೋಟಿ ರೂ. ಅನುದಾನ ನೀಡಲಾಗಿದೆ. ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ 1ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಮೇ 15ರ ನಂತರ ಭೂಮಿ ಪೂಜೆ ನಡೆಸಲಾಗುವುದು. ಈಗಾಗಲೇ ಪಟ್ಟಣ ಪಂಚಾಯಿತಿ ಕಾರ್ಯಾಲಯ ಕಟ್ಟಡ ಕಾಮಗಾರಿ ಪ್ರಾರಂಭಗೊಂಡಿದ್ದು, 3 ಕೋಟಿ ರೂ. ಅನುದಾನ ನೀಡಲಾಗಿದೆ. 7 ಕೋಟಿ ರೂ. ಅನುದಾನದಲ್ಲಿ ಕೋಲ್ಡ್ ಸ್ಟೋರೇಜ್ ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿದ್ದು, ತಾಲೂಕಿನ ರೈತರಿಗೆ ಹೆಚ್ಚು ಅನುಕೂಲವಾಗಿದೆ.
100ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ 10ಎಕರೆ ಭೂಮಿ ಮಂಜೂರಾಗಿದ್ದು, 40ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. 7ಎಕರೆಯಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ 7.5 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಗುದ್ನೇಶ್ವರ ದೇವಸ್ಥಾನದ ಭೂಮಿ ಸರ್ಕಾರದಾಗಿದ್ದು, ಗುತ್ತಿಗೆ ಆಧಾರದ ಮೇಲೆ ತಹಸೀಲ್ದಾರ್ ಕಚೇರಿ, ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗುವುದು. ಜೂನ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಕ್ಷೇತ್ರಕ್ಕೆ ಕರೆಯಲಾಗುತ್ತಿದ್ದು, ಕೆರೆ ತುಂಬಿಸುವ ಯೋಜನೆ, 125ಹಳ್ಳಿಗಳಿಗೆ ಕುಡಿವ ನೀರಿನ ಯೋಜನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.
ಪ್ರಮುಖರಾದ ಖಾಸೀಂಸಾಬ್ ತಳಕಲ್, ಕೆಆರ್‌ಡಿಎಲ್ ಎಇ ಅನಿಲ್ ಪಾಟೀಲ್, ಇಇ ವಿಜಯಕುಮಾರ ಇತರರಿದ್ದರು.
"

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜವಾಬ್ದಾರಿಯಿಂದ ವರ್ತಿಸಬೇಕು. ಸದ್ಯ ಇರುವ ಹಾಲಿ ಸೀಟ್‌ಗಳಿಗೆ ಮಹಿಳೆಯರಿಗೆ ಶೇ.33 ಮಾನ್ಯತೆ ತರುವುದಾಗಿದ್ದರೆ ಬಿಲ್ ಪಾಸಾಗುತ್ತಿತ್ತು. 2011ರ ಜನಸಂಖ್ಯೆ ಆಧರಿಸಿ ಮಾಡುತ್ತೇವೆ ಎಂದು ಹೇಳುತ್ತಾರೆ. ದಕ್ಷಿಣ ಭಾರತ ಭಾಗದ ರಾಜ್ಯಗಳಿಗೆ ಎಂಪಿ ಸ್ಥಾನ ಕಡಿಮೆಯಾಗುತ್ತದೆ. ಶೇ.50 ಅನುಪಾತದಡಿ ಮಾಡುತ್ತೇವೆ ಎಂದರು. ಆದರೆ, ಬಿಲ್‌ನಲ್ಲಿ ಇಲ್ಲ. ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಾರೆ. ಮಹಿಳಾ ಬಿಲ್ ಪಾಸ್ ಮಾಡಿಲ್ಲ ಎನ್ನುವ ಆರೋಪ ಮಾಡಲು ಹೊರಟಿದ್ದಾರೆ. ಈ ಹಿಂದೆ ಕಾಂಗ್ರೆಸ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50 ಮೀಸಲು ನೀಡಿದೆ. ಎಂಪಿ ಸ್ಥಾನಗಳು ಉತ್ತರ ಭಾಗದ ರಾಜ್ಯಗಳಿಗೆ ಹೆಚ್ಚು ಹೋಗುತ್ತವೆ. ಇದರಿಂದ ದಕ್ಷಿಣ ಭಾಗದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಉತ್ತರ ಭಾಗದವರೇ ಹೆಚ್ಚು ಮಂತ್ರಿ ಸ್ಥಾನ ಪಡೆದುಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net