ಮೋಸದ ಜಾಲಕ್ಕೆ ಯಾರೂ ಒಳಗಾಗಬೇಡಿ

ಯಲಬುರ್ಗಾ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಮಾನವ ಕಳ್ಳ ಸಾಗಣೆ ವಿರೋಧಿ ದಿನ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಮಿಳಾ ಎಂ. ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಸುಭಾಷ್, ಹೊಂಬಳ ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ಪ್ರಾಚಾರ್ಯ ಸಿದ್ದರಾಮಯ್ಯ ಹಿರೇಮಠ, ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್. ನಾಯಕರ, ಪ್ರ. ಕಾರ್ಯದರ್ಶಿ ಈ.ಟಿ., ಅಂಗನವಾಡಿ ಮೇಲ್ವಿಚಾರಕಿ ಲಲಿತಾ ನಾಯ್ಕರ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಮಿಳಾ ಎಂ. ಸಲಹೆ
  • ಕಾನೂನು ನೆರವು ಕಾರ್ಯಕ್ರಮ
ಯಲಬುರ್ಗಾ: ಮಾನವ ಕಳ್ಳ ಸಾಗಣೆ ಗಂಭೀರವಾದ ಸಂಘಟಿತ ಅಪರಾಧ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಮಿಳಾ ಎಂ. ಹೇಳಿದರು.
ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಅಭಿಯೋಜನೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾನವ ಕಳ್ಳ ಸಾಗಣೆ ವಿರೋಧಿ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಾಭ ಗಳಿಸುವ ಉದ್ದೇಶದಿಂದ ವ್ಯಕ್ತಿಗಳನ್ನು ಬಲವಂತವಾಗಿ ವಂಚನೆ ಹಾಗೂ ಬೆದರಿಕೆ ಮೂಲಕ ಬಲೆಗೆ ಬೀಳಿಸಿ, ಶೋಷಣೆಗೆ ಒಳಪಡಿಸಲಾಗುತ್ತದೆ. ಯಾರೇ ಆಗಲಿ ಅಪರಿಚಿತರಿಂದ ದೂರವಿರಬೇಕು. ಇಂತಹ ವ್ಯವಸ್ಥೆಯಿಂದ ರಕ್ಷಿಸಿಕೊಳ್ಳಲು 112 ಮತ್ತು 109ಕ್ಕೆ ಕರೆ ಮಾಡಬೇಕು ಎಂದು ತಿಳಿಸಿದರು.
ಸಿವಿಲ್ ನ್ಯಾಯಾಧೀಶ ಸಂಜುಕುಮಾರ ಪಚ್ಚೆಪೂರೆ ಮಾತನಾಡಿ, ಅಂಕಿ ಅಂಶಗಳ ಪ್ರಕಾರ ವಿದೇಶಕ್ಕೆ ಅತಿ ಹೆಚ್ಚು ಹೆಣ್ಣು ಮಕ್ಕಳನ್ನು ಸಾಗಣೆ ಮಾಡುತ್ತಿದ್ದು, ಅಂತಹದ್ದೊಂದು ಜಾಲವಿದೆ. ಎಲ್ಲರೂ ಸಮಾಜದಲ್ಲಿ ಎಚ್ಚರದಿಂದ ಬದುಕು ನಡೆಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಸುಭಾಷ್ ಹೊಂಬಳ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್ ಮಾತನಾಡಿದರು. ಪ್ರಾಚಾರ್ಯ ಸಿದ್ದರಾಮಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್. ನಾಯಕರ, ಪ್ರ. ಕಾರ್ಯದರ್ಶಿ ಈ.ಟಿ., ಮಹಾಂತೇಶ, ಅಂಗನವಾಡಿ ಮೇಲ್ವಿಚಾರಕಿಯರಾದ ಲಲಿತಾ ನಾಯ್ಕರ, ಮಾಧವಿ ವೈದ್ಯ, ನ್ಯಾಯಾಲಯ ಸಿಬ್ಬಂದಿ ರಾಘವೇಂದ್ರ ಕುಲಕರ್ಣಿ, ವಿನಾಯಕ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net