ಇತಿಹಾಸ ಅಧ್ಯಯನಕ್ಕಿದೆ ಮಹತ್ವ

ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಾಗಾರವನ್ನು ಸಹಾಯಕ ಪ್ರಾಧ್ಯಾಪಕ ಡಾ.ಬಿ.ನಾಗೇಂದ್ರಪ್ಪ ಮಂಗಳವಾರ ಉದ್ಘಾಟಿಸಿದರು.   ಪ್ರಾಚಾರ್ಯ ಡಾ.ಶಿವರಾಜ್ ಜಿ.ಗುರಿಕಾರ್, ಐಕ್ಯೂಎಸಿ ಸಂಚಾಲಕ ಎಚ್.ಕೆ.ಮಂಜುನಾಥ, ಸಹಾಯಕ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಇತರರಿದ್ದರು.
ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಾಗಾರವನ್ನು ಸಹಾಯಕ ಪ್ರಾಧ್ಯಾಪಕ ಡಾ.ಬಿ.ನಾಗೇಂದ್ರಪ್ಪ ಮಂಗಳವಾರ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಶಿವರಾಜ್ ಜಿ.ಗುರಿಕಾರ್, ಐಕ್ಯೂಎಸಿ ಸಂಚಾಲಕ ಎಚ್.ಕೆ.ಮಂಜುನಾಥ, ಸಹಾಯಕ ಪ್ರಾಧ್ಯಾಪಕಿ ಡಾ.ಮುಮ್ತಾಜ್ ಬೇಗಂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಹಾಯಕ ಪ್ರಾಧ್ಯಾಪಕ ಡಾ.ಬಿ. ನಾಗೇಂದ್ರಪ್ಪ ಅಭಿಮತ
  • ವಿಶೇಷ ಉಪನ್ಯಾಸ ಕಾರ್ಯಾಗಾರ
ಗಂಗಾವತಿ: ಆಳವಾದ ಅಧ್ಯಯನ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಿದ್ದು, ಇತಿಹಾಸ ಅಧ್ಯಯನಕ್ಕೆ ವಿಶೇಷ ಮಹತ್ವವಿದೆ ಎಂದು ಹಗರಿಬೊಮ್ಮನಹಳ್ಳಿ ಜಿವಿಪಿಪಿ ಸರ್ಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಬಿ. ನಾಗೇಂದ್ರಪ್ಪ ಹೇಳಿದರು.
ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ, ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸ ಅಧ್ಯಯನದ ಮಹತ್ವ ಕುರಿತ ವಿಶೇಷ ಉಪನ್ಯಾಸ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸ ಅಧ್ಯಯನಕ್ಕೆ ಮಹತ್ವವಿದ್ದು, ಸಾಮಾನ್ಯ ಪತ್ರಿಕೆ ನೂರು ಪ್ರಶ್ನೆಗಳಲ್ಲಿ 15-20 ಪ್ರಶ್ನೆಗಳು ಇತಿಹಾಸ ವಿಷಯ ಆಧರಿಸಿವೆ. ಮೂಲಾಧಾರಗಳು, ಸಾಂಸ್ಕೃತಿಕ ಇತಿಹಾಸದ ಕಾಲಾನುಕ್ರಮ ಮತ್ತು ಕಾರ್ಯಕಾರಣ ಸಂಬಂಧದ ಗ್ರಹಿಕೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಲ್ಯಕ್ಕೆ ಕಾರಣವಾಗಲಿವೆ ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ.ಶಿವರಾಜ ಜಿ.ಗುರಿಕಾರ್ ಮಾತನಾಡಿ, ಇತಿಹಾಸ ಮರೆತವರು ಇತಿಹಾಸ ಸಷ್ಟಿಸಲಾರರು. ಆಸಕ್ತಿ, ಕಲಿಕೆ ಮತ್ತು ಗ್ರಹಿಕೆ ಅಧ್ಯಯನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಇತಿಹಾಸ ಓದುವುದಕ್ಕಷ್ಟೇ ಸೀಮಿತವಾಗಬಾರದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಇತಿಹಾಸ ಸೃಷ್ಟ್ಟಿಸಲು ಸನ್ನದ್ಧರಾಗಬೇಕೆಂದರು.ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಇಬ್ರಾಹಿಂಸಾಬ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಐಕ್ಯೂಎಸಿ ಸಂಚಾಲಕ ಎಚ್.ಕೆ.ಮಂಜುನಾಥ, ವಿವಿಧ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮುಮ್ತಾಜ್‌ಬೇಗಂ, ಡಾ.ಚನ್ನಬಸಪ್ಪ ಕುಂಬಾರ, ರವಿ, ಡಾ.ಜೆ.ಕಷ್ಣ, ಎ.ಎನ್. ರವಿ, ಡಾ.ಆರ್.ಅಣ್ಣೋಜಿ ರೆಡ್ಡಿ, ಡಾ.ಅನಿಲ್‌ಕುಮಾರ್ ಎಡ್ವರ್ಡ್,ಕೆ.ಎಸ್. ಶೋಭಾ, ಬಾರಿಕಾರ ಣಿರಾಜ, ರವಿಕುಮಾರ, ಅಶ್ರ್ ಅಳ್ಳಳ್ಳಿ, ಕೆ.ಎಂ. ಅನಿತಾ, ಎ.ಅನಿಲ್‌ಕುಮಾರ, ಅಕ್ಕಿ ಮಾರುತಿ, ಮೆಹತಾಬ್ ಅಂಜುಮ್, ಡಾ.ಏಟಕೂರಿ ದೊರೆಬಾಬು, ಮಲ್ಲಿಕಾರ್ಜುನ, ಎಸ್.ಸುಮಲತಾ, ಸಲೀಂ, ಎ.ಭೂಮಿಕಾ, ಡಾ.ಕೆ.ಅಶೋಕ, ಎಸ್.ನಯನಾ, ಬಸವರಾಜ ಕರುಗಲ್, ಸಿ.ರಾಘಮ್ಮ, ಪ್ರತಿಭಾ ಮುದಗಲ್, ಶಾಮೀದ್, ವೀರೇಶ ಇತರರಿದ್ದರು.
ಉಪನ್ಯಾಸಕರಾದ ಡಾ.ಮಣಿಕಂಠ ಮತ್ತು ಡಾ.ಅಯ್ಯಳಿ ಯರ‌್ರಿಸ್ವಾಮಿ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net