ಇದೇ ಸಂದರ್ಭದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರ 47ನೇ ಜನ್ಮದಿನವನ್ನು ಮಾಜಿ ಸೈನಿಕರ ಸಂಘದಿಂದ ಶಾಸಕರ ಸ್ವಗೃಹದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಗಾಣಿಗೇರ, ಪದಾಧಿಕಾರಿಗಳಾದ ಶಿವಾನಂದ ಪೂಜಾರ, ವಾಸಪ್ಪ ಚೆಲ್ಲಾ, ಹೇಮಂತಪ್ಪ ಆರೇರ, ಬಸವರಾಜ ಮಠದ, ಇಂದುಧರ ಸೊಪ್ಪಿಮಠ, ಬಸಮ್ಮ ಕುರ್ಲಿ, ಜಯಶ್ರೀ ಚನ್ನಳ್ಳಿ ಹಾಗೂ ಸರ್ವ ಸದಸ್ಯರು, ಮಾಜಿ ಸೈನಿಕರ ಸಂಘದ ಮಹಿಳೆಯರು ಇದ್ದರು.