ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರ ಹಂಚಿಕೊಂಡ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಒಟ್ಟು 8.89 ಕೋಟಿ ರೂ. ಅಕ್ರಮವಾಗಿದೆ. ರವೀಂದ್ರ ಕುಮಾರ್ ಎಂಬಾತನ ವಿರುದ್ಧ ಮಾತ್ರ ದೂರು ದಾಖಲಾಗಿದೆ. ಆದರೆ, ಆತನ ಪತ್ನಿ ರಮಾ ಹಾಗೂ ಸಹೋದರ ಅನಿಲ್ ಕುಮಾರ್ ಅವರ ಖಾತೆಯಲ್ಲೂ ಅಕ್ರಮವಾಗಿ ಹಣ ವರ್ಗಾವಣೆ ಆಗಿದೆ. ಹೀಗಾಗಿ ಮೂವರನ್ನು ಬಂಧಿಸಲಾಗಿದೆ. ರವೀಂದ್ರ ಕುಮಾರ್ ನ್ಯಾಯಾಂಗ ವಶದಲ್ಲಿದ್ದು, ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತೇವೆ. ಸದ್ಯ ನಮಗೆ ಆಡಿಟ್ ವರದಿ ಸಿಕ್ಕಿದೆ. ಅದರಲ್ಲಿ ನಕಲಿ ಖಾತೆ ಹಾಗೂ ಅದರಲ್ಲಿನ ವ್ಯವಹಾರಗಳ ಬಗ್ಗೆ ಉಲ್ಲೇಖವಿಲ್ಲ. ರವೀಂದ್ರ ಕುಮಾರ್ ಹಾಗೂ ಅವರ ಕುಟುಂಬಸ್ಥರು ಸೇರಿ ಇತರ ಅಕೌಂಟ್ಗಳಿಗೆ ಹಣ ವಹಿವಾಟು ನಡೆದಿದೆ ಎಂದರು.