ಕುಷ್ಟಗಿ: ಆಧುನಿಕ ಕನ್ನಡ ನಾಡಿನ ಹೆಸರಾಂತ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾರ್ಯ ಅತ್ಯುತ್ತಮ ಎಂದು ತಹಸೀಲ್ದಾರ್ ಗುರುರಾಜ್ ಛಲವಾದಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೈಸೂರಿನ ಪ್ರಸಿದ್ಧ ರಾಜರಾದ ನಾಲ್ವಡಿ ಕೃಷ್ಣರಾಜರ ಪ್ರಖ್ಯಾತಿ ಹೊಂದಿದವರು. ಮಹಾರಾಜರು ಮೈಸೂರಿಗೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ನಾಡಿನಲ್ಲಿ ನವ ಕರ್ನಾಟಕದ ಪಿತಾಮಹ ಎಂದು ಕರೆಯಲಾಗುತ್ತಿದೆ ಎಂದರು.
ಗ್ರೇಡ್-2 ತಹಸೀಲ್ದಾರ್ ರಜನಿಕಾಂತ ಕೆಂಗೇರಿ, ಸಿಬ್ಬಂದಿ ಸುಂದರಾಜ್, ಚಂದ್ರು ಮುದೇನೂರು ಇನ್ನಿತರರಿದ್ದರು.