ಕೊಪ್ಪಳ ವಿವಿ ಆಡಳಿತಾಧಿಕಾರಿ ಹುದ್ದೆ ರದ್ದು

 ತಳಕಲ್​ ಇಂಜಿನಿಯರಿಂಗ್​ ಕಾಲೇಜು ಆವರಣದಲ್ಲಿರು ಕೊಪ್ಪಳ ವಿವಿ.
ತಳಕಲ್​ ಇಂಜಿನಿಯರಿಂಗ್​ ಕಾಲೇಜು ಆವರಣದಲ್ಲಿರು ಕೊಪ್ಪಳ ವಿವಿ.
Published on

ಪ್ರಮುಖ ಮುಖ್ಯಾಂಶಗಳು

  • ಹುದ್ದೆಯಿಂದ ತಿಮ್ಮಾರಡ್ಡಿ ಮೇಟಿ ಬಿಡುಗಡೆ
ಕೊಪ್ಪಳ : ಕೊಪ್ಪಳ ವಿವಿ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ತಿಮ್ಮಾರಡ್ಡಿ ಮೇಟಿಯನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಯಿಂದ ಬಂದ ನಿರ್ದೇಶನದ ಮೇರೆಗೆ ಶುಕ್ರವಾರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ವವಿದ್ಯಾಲಯ ಮೂಲಗಳು ತಿಳಿಸಿವೆ.
ಕೊಪ್ಪಳ ಪದವಿ ಕಾಲೇಜಿನ ಉಪನ್ಯಾಸಕರೊಬ್ಬರು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದು, ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಆಡಳಿತಾಧಿಕಾರಿ ಹುದ್ದೆಯ ಅವಶ್ಯಕತೆ ಇಲ್ಲ. ಇದರಿಂದ ಸರ್ಕಾರಕ್ಕೆ ಅನಗತ್ಯ ಆರ್ಥಿಕ ಹೊರೆ ಉಂಟಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.
ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪನೆಯಾದ ಸುಮಾರು ಒಂದು ವರ್ಷದ ನಂತರ, ವಿಶ್ವವಿದ್ಯಾಲಯದ ಆಡಳಿತ ಅವಶ್ಯಕತೆಗಳನ್ನು ಮನಗಂಡು ಆಟೋನಾಮಸ್​ ಬಾಡಿ ಮತ್ತು ಸಿಂಡಿಕೇಟ್​ ಅನುಮೋದನೆಯೊಂದಿಗೆ ಆಡಳಿತಾಧಿಕಾರಿ ಹುದ್ದೆ ಸೃಷ್ಟಿಸಲಾಗಿತ್ತು. ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ, ಆಡಳಿತ ನಿರ್ವಹಣೆ ಸುಗಮಗೊಳಿಸಲು ಈ ಹುದ್ದೆ ಅಗತ್ಯವೆಂದು ನಿರ್ಧರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
"

ನನ್ನನ್ನು ಸಿಂಡಿಕೇಟ್​ ಅನುಮೋದನೆಯ ನಂತರವೇ ನೇಮಕ ಮಾಡಲಾಗಿತ್ತು. ಆರಂಭದಲ್ಲಿ ನಾನು ಈ ಹುದ್ದೆಗೆ ಬರಲು ಆಸಕ್ತಿ ತೋರಿರಲಿಲ್ಲ. ಆದರೆ ಬಿ.ಕೆ. ರವಿ ಅವರು ಸುಮಾರು ಒಂದು ವರ್ಷ ಒತ್ತಾಯಿಸಿದ ಬಳಿಕ ಒಪ್ಪಿಕೊಂಡೆ. ಒಬ್ಬ ವ್ಯಕ್ತಿಯ ದೂರಿನ ಮೇರೆಗೆ ಸರ್ಕಾರ ತಕ್ಷಣ ಇಂತಹ ನಿರ್ಧಾರ ತೆಗೆದುಕೊಳ್ಳಬಾರದು.

— ತಿಮ್ಮಾರಡ್ಡಿ ಮೇಟಿ

"

ಹಿಂದಿನ ರಿಜಿಸ್ಟ್ರಾರ್​ ಅವರು ಧೀರ್ಘಕಾಲದ ರಜೆ ಮಾಡಿರುವ ಹಿನ್ನಲೆಯಲ್ಲಿ ಆಗಿನ ವಿಸಿಗಳು ಸಿಂಡಿಕೇಟ್​ ನಲ್ಲಿ ಚರ್ಚಿಸಿ ಆಡಳಿತದ ಹಿತಕ್ಕಾಗಿ ಸಿಂಡಿಕೇಟ್​ ಅನುಮೋದನೆಯೊಂದಿಗೆ ತಾತ್ಕಾಲಿಕವಾಗಿ ಆಡಳಿತ ಅಧಿಕಾರಿ ಹುದ್ದೆ ಸೃಷ್ಟಿಸಿ ತಿಮ್ಮರಡ್ಡಿಯವರನ್ನು ನೇಮಿಸಿಲಾಗಿತ್ತು. ಪ್ರಸ್ತುತ ರಿಜಿಸ್ಟ್ರಾರ್​ ಮತ್ತು ವಿಸಿ ಇಬ್ಬರು ಇರುವುದರಿಂದ ಸರ್ಕಾರ ಆಡಳಿತ ಅಧಿಕಾರಿ ಹುದ್ದೆಯನ್ನು ರದ್ದುಗೊಳಿಸಿ ತಿಮ್ಮಾರಡ್ಡಿ ಮೇಟಿಯವರನ್ನು ಹುದೆಯಿಂದ ಬಿಡುಗಡೆಗೊಳಿಸುವಂತೆ ಆದೇಶ ಬಂದಿತ್ತು. ಅದರಂತೆ ಅವರನ್ನು ಬಿಡುಗಡೆ ಮಾಡಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

— ಎಸ್​.ವಿ ಡಾಣಿ ವಿಸಿ ಕೊಪ್ಪಳ ವಿವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net