ಕೊಪ್ಪಳ ಬರಪೀಡಿತ ತಾಲೂಕೆಂದು ಘೋಷಿಸಲಿ

ಬೆಟಗೇರಿ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಇಮಾಮ್‌ಸಾಬ್ ಬಾವಿ, ಹನುಮಂತ, ಹನುಮರಡ್ಡಿ ಬೆಲಡಗಿ, ಮಂಜುನಾಥ ಬೆಟಗೇರಿ, ಜಗದೀಶ ಯತ್ನಳ್ಳಿ, ಏಳುಕೋಟೇಶ ಕೋಮಲಾಪುರ, ಬಸಪ್ಪ ಉಪ್ಪಾರ ಇತರರಿದ್ದರು.
ಬೆಟಗೇರಿ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಇಮಾಮ್‌ಸಾಬ್ ಬಾವಿ, ಹನುಮಂತ, ಹನುಮರಡ್ಡಿ ಬೆಲಡಗಿ, ಮಂಜುನಾಥ ಬೆಟಗೇರಿ, ಜಗದೀಶ ಯತ್ನಳ್ಳಿ, ಏಳುಕೋಟೇಶ ಕೋಮಲಾಪುರ, ಬಸಪ್ಪ ಉಪ್ಪಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೆಟಗೇರಿಯಲ್ಲಿ ರೈತರು ಪ್ರತಿಭಟನೆ
  • ಅಳವಂಡಿ ಬೆಟಗೇರಿ ರೈತರ ಆಗ್ರಹ
ಅಳವಂಡಿ: ಪ್ರಸಕ್ತ ವರ್ಷ ಮುಂಗಾರು ಮಳೆ ಸಮರ್ಪಕವಾಗದ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಕೊಪ್ಪಳ ತಾಲೂಕನ್ನು ಬರಪೀಡಿತವೆಂದು ಘೋಷಿಸಲು ಆಗ್ರಹಿಸಿ ಬೆಟಗೇರಿ ಗ್ರಾಮದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಬಿತ್ತನೆ ಮಾಡಿದ ಬೆಳೆಗಳು ಸಮರ್ಪಕವಾಗಿ ಬೆಳೆಯದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಾನುವಾರುಗಳಿಗೆ ಮೇವು ಹಾಗೂ ಕುಡಿವ ನೀರಿನ ಸಮಸ್ಯೆಯೂ ಎದುರಾಗಿದ್ದು, ಸರ್ಕಾರ ಕೂಡಲೇ ಪರಿಸ್ಥಿತಿಯನ್ನು ಪರಿಶೀಲಿಸಿ ಕೊಪ್ಪಳ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಪ್ರಮುಖರಾದ ಇಮಾಮ್‌ಸಾಬ್ ಬಾವಿ, ಹನುಮಂತ, ಹನುಮರಡ್ಡಿ ಬೆಲಡಗಿ, ಮಂಜುನಾಥ ಬೆಟಗೇರಿ, ಜಗದೀಶ ಯತ್ನಳ್ಳಿ, ಏಳುಕೋಟೇಶ ಕೋಮಲಾಪುರ, ಬಸಪ್ಪ ಉಪ್ಪಾರ, ಭೀಮಣ್ಣ ಕವಲೂರು, ಬಸಪ್ಪ ಉಪ್ಪಾರ, ಸಣ್ಣ ನಾರಾಯಣಗೌಡ, ಯಂಕಪ್ಪ ಕಂಬಳಿ, ಸುನೀಲ್ ಮತ್ತೂರು, ಮಂಜುನಾಥ, ನಿಂಗಪ್ಪ, ರಮೇಶ, ಕುಮಾರ, ಫಕೀರಡ್ಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net