ಕೊಪ್ಪಳ ರೈಲು ನಿಲ್ದಾಣ ಹೈಟೆಕ್​

ಕೊಪ್ಪಳ ನೂತನ ರೈಲು ನಿಲ್ದಾಣದ ನೋಟ.
ಕೊಪ್ಪಳ ನೂತನ ರೈಲು ನಿಲ್ದಾಣದ ನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಪ್ರಧಾನಿಯಿಂದ ಲೋಕಾರ್ಪಣೆ
ಕೊಪ್ಪಳ : ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣಗೊಂಡಿದ್ದ ನಗರದ ರೈಲ್ವೆ ನಿಲ್ದಾಣವನ್ನು ಅಮೃತ್​ ಭಾರತ್​ ಸ್ಟೇಷನ್​ ಯೋಜನೆಯಡಿ ಮರು ನಿರ್ಮಾಣ ಮಾಡಲಾಗಿದೆ. ಅತ್ಯಾಧುನಿಕ ಸೌಲಭ್ಯ ಕಲ್ಪಿಸಿದ್ದು ಇಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್​ ವೇದಿಕೆ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ.
ದೇಶಾದ್ಯಂತ ಒಂದೇ ಮಾದರಿ ನಿಲ್ದಾಣ ಕಲ್ಪಿಸಲಾಗುತ್ತಿದ್ದು ಕೊಪ್ಪಳ ನಿಲ್ದಾಣಕ್ಕೆ 21.14 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜಿ+1 ಕಟ್ಟಡ ನಿರ್ಮಿಸಿದ್ದು, ಟಿಕೆಟ್​ ಬುಕ್ಕಿಂಗ್​ ಕಚೇರಿ, ನಿರೀಕ್ಷಣಾ ಕೊಠಡಿಗಳು, 600 ಚದರ ಮೀಟರ್​ ಸುತ್ತಾಟ ಪ್ರದೇಶ, ವಾಹನ ಸಂಚಾರ, ಪ್ರತ್ಯೇಕ ಪಾರ್ಕಿಂಗ್​, ಆರು ಸಾವಿರ ಚದರ ಮೀಟರ್​ ಉದ್ದದ ಫ್ಲಾಟ್ ಫಾಮ್​ರ್ಗೆ ಶೆಲ್ಟರ್​ ನಿರ್ಮಾಣ ಮಾಡಲಾಗಿದೆ. ಮಳೆ, ಬಿಸಿಲಿನಿಂದ ಪ್ರಯಾಣಿಕರು ರಸಿಕೊಳ್ಳಲು ಅನುಕೂಲವಾಗಿದೆ.
ಹಿರಿಯ ನಾಗರಿಕರು, ಅಂಗವಿಕಲರ ಅನುಕೂಲಕ್ಕಾಗಿ ಎರಡು ಎಸ್ಕಲೇಟರ್​, ಎರಡು ಲಿಫ್ಟ್ ಕಲ್ಪಿಸಲಾಗಿದೆ. ಮಾಹಿತಿ ಲಕ, ಎಲ್​ಇಡಿ ಸ್ಕ್ರೀನ್​, ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, ರೈಲು ಆಗಮನ, ನಿರ್ಗಮನ ಮಾಹಿತಿ ನೀಡುವಿಕೆ ಸುಲಭಗೊಳಿಸಿದೆ. ಮುಂಭಾಗವನ್ನು ಆಕರ್ಷಕವಾಗಿ ಡಿಸೈನ್​ ಮಾಡಿದ್ದು, ವಿದ್ಯುತ್​ ದೀಪ, ಸಿಸಿಟಿವಿ ಕ್ಯಾಮರಾ, ವಿಶಾಲ ಪಾರ್ಕಿಂಗ್​, ಆಧುನಿಕ ಶೈಲಿಯ ವಿನ್ಯಾಸಗೊಳಿಸಲಾಗಿದೆ. ಶಿಶುವಿಹಾರ ಕೇಂದ್ರ, ಎಸಿ ಇರುವ ನಿರೀಕ್ಷಣಾ ಕೊಠಡಿಗಳು, ಸ್ವಯಂ ಚಾಲಿತ ಟಿಕೆಟ್​ ನೀಡುವ ಯಂತ್ರ, ಶೌಚಗೃಹ, ಕುಡಿವ ನೀರು ವ್ಯವಸ್ಥೆ ಒದಗಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net