ಕೊಪ್ಪಳ: ನಗರದ ಶ್ರೀ ರಾವೇಂದ್ರ ಸ್ವಾಮಿ ಮಠದಲ್ಲಿ ಶನಿವಾರ 355ನೇ ಆರಾಧನಾ ಮಹೋತ್ಸವ ಅಂಗವಾಗಿ ಪೂರ್ವರಾಧನೆ ವಿಜೃಂಭಣೆಯಿಂದ ನೆರವೇರಿತು. ಸಂಸದ ರಾಜಶೇಖರ ಹಿಟ್ನಾಳ ಸೇರಿ ಇತರ ಗಣ್ಯರು ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದರು.
ಬೆಳಗ್ಗೆ ಐದು ಗಂಟೆಗೆ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಮದ್ಘಾಗವತ ಪ್ರವಚನ, ನೈವೇದ್ಯ, ಹಸ್ತೋದಕ, ಅಲಂಕಾರ, ತೀರ್ಥ ಪ್ರಸಾದ ಕಾರ್ಯಕ್ರಮ ನೆರವೇರಿದವು. ಸಂಜೆ 6 ಗಂಟೆಗೆ ಅರ್ನವಬುವಾ ಕೊಲ್ಲಾಪುರ ಅವರಿಂದ ಭಕ್ತಿ ಸಂಗೀತ, 8 ಗಂಟೆಗೆ ಪ್ರತಿಭಾ ಪುರಸ್ಕಾರ ಹಾಗೂ 9.30ಕ್ಕೆ ರಥೋತ್ಸವ, ಸ್ವಸ್ತಿವಾಚನ ತೊಟ್ಟಿಲು ಪೂಜೆ, ಫಲ ಮಂತ್ರಾಕ್ಷತೆ ನೆರವೇರಿಸಲಾಯಿತು.
ಭಾನುವಾರ ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ, ಸಂಜೆ 6ಗಂಟೆಗೆ ಬೆಂಗಳೂರಿನ ಆದಿತ್ಯ ಪಲ್ಲಕ್ಕಿ ಅವರಿಂದ ಭಕ್ತಿ ಸಂಗೀತ, ಪಂಡಿತ ಪುರಸ್ಕಾರ, 8.30ಕ್ಕೆ ರಾಘವೇಂದ್ರ ವಿಜಯ ಪ್ರವಚನ ಮಂಗಲ ಮಹೋತ್ಸವ ಹಾಗೂ 9.30ಕ್ಕೆ ರಥೋತ್ಸವ ನಡೆಯಲಿದೆ.
ಸೋಮವಾರ ಉತ್ತರಾರಧನೆ ಅಂಗವಾಗಿ ಮಧ್ಯಾಹ್ನ 12.15ಕ್ಕೆ ರಥೋತ್ಸವ ಜರುಗಲಿದೆ. ಸಂಜೆ 6 ಗಂಟೆಗೆ ಪುತ್ತೂರು ನರಸಿಂಹ ನಾಯಕ ಅವರಿಂದ ಭಕ್ತಿ ಸಂಗೀತ, ರಾತ್ರಿ 8 ಗಂಟೆಗೆ ಸೇವಾ ಪುರಸ್ಕಾರ, 8.15ಕ್ಕೆ ಗುಡೆಬೆಲ್ಲೂರಿನ ಪಂಡಿತ್ ವೆಂಕಟನರಸಿಂಹಾಚಾರ್ಯ ಅವರಿಂದ ಪ್ರವಚನ ನಡೆಯಲಿದೆ.
ಸೋಮವಾರದವರೆಗೆ ಮೂರು ದಿನ ಆರಾಧನೆ ನಡೆಯಲಿದೆ. ಮಠದಂಗಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಪ್ರಧಾನ ಅರ್ಚಕ ಪಂಡಿತ್ ರಘು ಪ್ರೇಮಾಚಾರ್ಯ ಮುಳಗುಂದ ಅವರು ರಾಘವೇಂದ್ರವಿಜಯ ಪ್ರವಚನ ನಡೆಸಿಕೊಡಲಿದ್ದು ನಿತ್ಯ ಸಂಜೆ 6.15ರಿಂದ 7.15ಗಂಟೆವರೆಗೆ ಇರಲಿದೆ.