ಕೊಪ್ಪಳ ನಗಸಭೆ ಜೆಇ ಸೋಮಲಿಂಗಪ್ಪ ಅಮಾನತು

ಕೊಪ್ಪಳ ನಗರಸಭೆ
ಕೊಪ್ಪಳ ನಗರಸಭೆ
Published on

ಪ್ರಮುಖ ಮುಖ್ಯಾಂಶಗಳು

  • 10 ಕೋಟಿ ರೂ. ಅವ್ಯವಹಾರ
  • ಮೂವರು ಅಧಿಕಾರಿಗಳ ವಿರುದ್ಧ ಲೋಕಾ ಪ್ರಕರಣ
ಕೊಪ್ಪಳ:ನಗರಸಭೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಸಿ ಕಿರಿಯ ಅಭಿಯಂತರ ಸೋಮಲಿಂಗಪ್ಪ ಅವರನ್ನು ಅಮಾನತುಗೊಳಿಸಿ ಪೌರಾಡಳಿತ ನಿರ್ದೇಶನಾಲಯ ಆದೇಶಿಸಿದೆ. 
ನಗರ ಶಕ್ತಿ ಕೇಂದ್ರದಲ್ಲಿ ಸುಮಾರು 10 ಕೋಟಿ ರೂ. ಕಾಮಗಾರಿಯಲ್ಲಿ ಅವ್ಯವಹಾರ ಆರೋಪ ಕೇಳಿ ಬಂದಿದೆ. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. 336ಕ್ಕೂ ಅಧಿಕ ಕಾಮಗಾರಿಗಳಲ್ಲಿ ಬಹುತೇಕ ಕಾಮಗಾರಿ ಮಾಡಿಲ್ಲ. ಮಾಡಿದ ಕಾಮಗಾರಿಗಳೂ ಗುಣಮಟ್ಟದಿಂದ ಕೂಡಿಲ್ಲ. 2023&25ರ ಅವಧಿಯಲ್ಲಿ ಅಕ್ರಮ ನಡೆದಿದೆ. ಆಗಿನ ಪೌರಾಯುಕ್ತ ಗಣಪತಿ ಪಾಟೀಲ್​, ಎಇಇ ಮಧುರ ಮಗದೂರ, ಕಿರಿಯ ಅಭಿಯಂತರ ಸೋಮಲಿಂಗಪ್ಪ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. 
ನಗರಸಭೆ ನಿಧಿ, ನೀರು ಸರಬರಾಜು ನಿಧಿ, 15ನೇ ಹಣಕಾಸು ನಿಧಿ, ಸ್ವಚ್ಛ ಭಾರತ ಯೋಜನೆಯಡಿ ಹಣ ದುರ್ಬಳಕೆಯಾಗಿದೆ. ನಗರಸಭೆಗೆ 10 ಕೋಟಿ ರೂ. ಆರ್ಥಿಕ ನಷ್ಟವಾಗಿದೆ. ಎಸ್​.ಆರ್​,ಕನ್ಸಲ್ಟಂಟ್ಸ್​ನ ಕುಮಾರ ಎಂಬುವವರ ಜತೆಗೂಡಿ ಅಕ್ರಮ ಎಸಗಲಾಗಿದೆ. ಕೆಲ ಕಾಮಗಾರಿಗಳನ್ನು ಮಾಡಿಲ್ಲ. ಮಾಡಿದ ಕಾಮಗಾರಿಗಳೂ ಕಳಪೆಯಾಗಿವೆ. ನಕಲಿ ದರಪಟ್ಟಿ ತರಿಸಿಕೊಂಡು ತಮಗೆ ಬೇಕಾದ ಗುತ್ತಿಗೆದಾರರಿಗೆ ಸಹಾಯ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. 
ಹೀಗಾಗಿ ಅಮಾನತುಗೊಳಿಸುವಂತೆ ಲೋಕಾಯುಕ್ತ ಪೊಲೀಸ್​ ಮಹಾನಿರೀಕ್ಷಕರು ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಸಲ್ಲಿಸಿದ್ದದರು. ಹೆಚ್ಚಿನ ತನಿಖೆಗೆ ಅಡ್ಡಿ ಹಾಗೂ ಸಾಕ್ಷ$್ಯ ನಾಶಪಡಿಸುವ ಸಾಧ್ಯತೆ ಕಾರಣ ಸೋಮಲಿಂಗಪ್ಪನನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ ಕೊಪ್ಪಳ ನಗರಸಭೆಯಿಂದ ಚಿಟಗುಪ್ಪ ಪುರಸಭೆಗೆ ಕಿರಿಯ ಅಭಿಯಂತರರಾಗಿ ಸ್ಥಳನಿಯುಕ್ತಿ ಮಾಡಲಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪಿ.ಎನ್​.ರವೀಂದ್ರ ಆದೇಶದಲ್ಲಿ ತಿಳಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net