ಕೊಪ್ಪಳ ಫುಟ್​ ತೆರವು ಠುಸ್​ !

ಕೊಪ್ಪಳದಲ್ಲಿ ಅತಿಕ್ರಮಗೊಂಡಿರುವ ಫುಟ್​ಪಾತ್​.
ಕೊಪ್ಪಳದಲ್ಲಿ ಅತಿಕ್ರಮಗೊಂಡಿರುವ ಫುಟ್​ಪಾತ್​.
Published on

ಪ್ರಮುಖ ಮುಖ್ಯಾಂಶಗಳು

  • ನಗರಾಡಳಿತದ ಮೇಲಿನ ನಿರೀೆ ಹುಸಿ
  • ಶಾಶ್ವತ ಪರಿಹಾರಕ್ಕಿಲ್ಲ ಆಸಕ್ತಿ
ಕೊಪ್ಪಳ : ಭತ್ತದ ನಗರಿ ಗಂಗಾವತಿಯಲ್ಲಿ ಕೊನೆಗೂ ಫುಟ್​ಪಾತ್​ ಅತಿಕ್ರಮಣ ತೆರವಾಗುತ್ತಿದೆ. ಆದರೆ, ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಕೆಲ ತಿಂಗಳ ಹಿಂದೆಯೇ ನಡೆದ ಕಾರ್ಯಾಚರಣೆ ಠುಸ್​ ಆಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಜಾಗ ಹುಡುಕಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಗರಾಡಳಿತ ವಿಲವಾಗಿದ್ದು ಸಮಸ್ಯೆ ಜಟೀಲಗೊಂಡಿದೆ.
ದಿನ ಕಳೆದಂತೆ ಕೊಪ್ಪಳ ಸುತ್ತಲೂ ಹೊಸ ಕೈಗಾರಿಕೆಗಳು ತಲೆ ಎತ್ತುತ್ತಿವೆ. ನಾಲ್ಕು ದಿಕ್ಕಿನಲ್ಲಿ ನಗರ ಬೆಳೆಯುತ್ತಿದೆ. ಹೊಸಪೇಟೆ, ಹುಬ್ಬಳ್ಳಿ, ಬೆಂಗಳೂರಿನಂಥ ಪ್ರಮುಖ ನಗರಿಗಳಿಗೆ ಸಂಪರ್ಕ ಕೊಂಡಿಯಾಗಿದೆ. ಅಧಿಕಾರಿ ವರ್ಗ, ಉದ್ಯಮಿಗಳು, ಸುತ್ತಲ ಗ್ರಾಮಗಳ ಜನರು ನಗರ ಸೇರುತ್ತಿದ್ದಾರೆ. ನಿವೇಶನಗಳ ಬೆಲೆ ಗಗನಕ್ಕೇರಿದ್ದು, ನಗರದಲ್ಲಿ ಜನಜಂಗುಳಿ ಹೆಚ್ಚುತ್ತಿದೆ. ವಿವಿಧ ಉದ್ಯಮಗಳು ತಲೆ ಎತ್ತುತ್ತಿವೆ. ಆದರೆ, ಪಾದಚಾರಿ ರಸ್ತೆ ದಿನಕಳೆದಂತೆ ಅತಿಕ್ರಮವಾಗುತ್ತಿದೆ.
ನಗರದ ಮುಖ್ಯ ರಸ್ತೆ, ಜವಾಹರ ರಸ್ತೆಗಳಲ್ಲಿ ಈ ಮೊದಲು ಫುಟ್​ಪಾತ್​ ಒತ್ತುವರಿಯಾಗಿತ್ತು. ಇತ್ತೀಚೆಗೆ ಒಳ ಭಾಗದ ರಸ್ತೆಗಳಲ್ಲೂ ಅತಿಕ್ರಮಣ ನಡೆಯುತ್ತಿದೆ. ಜಿಲ್ಲಾಸ್ಪತ್ರೆ ಮುಂಭಾಗದಲ್ಲೂ ದಿನೇ ದಿನೆ ಹೊಸ ಅಂಗಡಿಗಳು ತಲೆ ಎತ್ತುತ್ತಿವೆ. ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು ಟ್ರಾಫಿಕ್​, ಅಪಘಾತಕ್ಕೆ ಆಹ್ವಾನ ನೀಡಿದಂತಾಗುತ್ತಿದೆ. ನಗರಾಡಳಿತ ಚುನಾಯಿತ ಪ್ರತಿನಿಧಿಗಳ ಆಡಳಿತದಲ್ಲಿದ್ದಾಗ ಪ್ರತಿ ಸಭೆಯಲ್ಲೂ ಫುಟ್​ಪಾತ್​ ತೆರವು ವಿಷಯ ಚರ್ಚೆಯಾಗಿದೆ. ಬೆಳಗಾಗುತ್ತಲೇ ನೋಟಿಸ್​ ನೀಡಿ ತೆರವು ಮಾಡುವುದಾಗಿ ಹೇಳುತ್ತಿದ್ದ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಮತ್ತದೇ ವಿಷಯ ಚರ್ಚಿಸಿ ದಿನದೂಡಿದ್ದಾರೆ.
ಇದೀಗ ಚುನಾಯಿತರ ಅವಧಿ ಮುಗಿದಿದ್ದು ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿಗಳು ಅಧಿಕಾರ ಸ್ವೀಕರಿಸಿದ್ದಾರೆ. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಪೌರಾಯುಕ್ತರ ಅಧಿಕಾರ ವಹಿಸಿಕೊಂಡಿದ್ದಾರೆ. ಈಗಲಾದರೂ ತೆರವು ಕಾರ್ಯಾಚರಣೆ ಆಗುವುದಾ ಎಂಬ ಜನರ ನಿರೀೆ ಹುಸಿಯಾಗಿದೆ. ಈ ಹಿಂದೆ ಇದ್ದ ಪೌರಾಯುಕ್ತ ವೆಂಕಟೇಶ ನಾಗನೂರು ುಟ್​ಪಾತ್​ ತೆರವಿಗೆ ಕೈ ಹಾಕುತ್ತಲೇ ವರ್ಗಾವಣೆ ಆಗುವಂತಾಯಿತು. ಈ ಮೂಲಕ ತೆರವು ಕಾರ್ಯಾಚರಣೆ ಠುಸ್​ ಪಟಾಕಿಯಂತಾಗಿದೆ.

ಬೇಕು ಶಾಶ್ವತ ಪರಿಹಾರ

ಸಾರ್ವಜನಿಕರ ಹಿತ ಕಾಯುವ ಜತೆಗೆ ಬೀದಿ ಬದಿ ವ್ಯಾಪಾರಿಗಳಿಗೂ ಅನುವು ಮಾಡಿಕೊಡುವ ಜವಾಬ್ದಾರಿ ನಗರಸಭೆ ಮೇಲಿದೆ. ಭವಿಷ್ಯದ ದಿನಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಶಾಶ್ವತ ಮಾರುಕಟ್ಟೆ ಕಲ್ಪಿಸಬೇಕಿದೆ. ಈ ಹಿಂದೆ ಜೆಪಿ ಮಾರುಕಟ್ಟೆ ನಿರ್ಮಾಣಗೊಂಡು ಹಲವು ವರ್ಷವಾದರೂ ತಾಲೂಕು ಕ್ರೀಡಾಂಗಣದಲ್ಲಿ ಬೀಡು ಬಿಟ್ಟಿದ್ದ ವ್ಯಾಪಾರಿಗಳು ತೆರವಿಗೆ ಸಿದ್ಧರಿರಲಿಲ್ಲ. ಕೊನೆಗೂ ಕಾರ್ಯಾಚರಣೆ ನಡೆಸಿ ಸ್ಥಳಾಂತರ ಮಾಡಲಾಯಿತು. ಸದ್ಯ ಇರುವ ಜನಸಂಖ್ಯೆ ಹಾಗೂ ಭವಿಷ್ಯದ ಅಗತ್ಯತೆ ಅನುಸಾರ ಸೂಕ್ತ ಜಾಗ ಗುರುತಿಸಿ ವ್ಯಾಪಾರಿಗಳನ್ನು ಒಂದೇ ಸೂರಿನಡಿ ತರಬೇಕಿದೆ.

ಜನಪ್ರತಿನಿಧಿಗಳ ಸಹಕಾರ ಅವಶ್ಯ

ನಗರ ಸೌಂದರ್ಯ ಕಾಪಾಡುವುದು ಹಾಗೂ ಸಾರ್ವಜನಿಕರು ಮತ್ತು ವ್ಯಾಪಾರಿಗಳ ಹಿತ ಕಾಯುವ ಕೆಲಸದಲ್ಲಿ ಅಧಿಕಾರಿ ವರ್ಗ, ಜನಪ್ರತಿನಿಧಿಗಳು, ವ್ಯಾಪಾರಿಗಳ ಸಂದ ಪದಾಧಿಕಾರಿಗಳ ಸಹಕಾರ ಅವಶ್ಯ. ಯಾವುದೇ ಒತ್ತಡಕ್ಕೆ ಮಣಿಯದೇ ನಗರ ಅಭಿವೃದ್ಧಿ ದೃಷ್ಟಿಯಿಂದ ತೆರವು ಕಾರ್ಯಾಚರಣೆ, ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಯಾರಿಗೂ ಸಮಸ್ಯೆ ಆಗದ ರೀತಿಯಲ್ಲಿ ಚರ್ಚಿಸಿ ಪರಿಹಾರ ಒದಗಿಸಿಕೊಳ್ಳಲು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಶಾಸಕ, ಸಂಸದರು, ಅಧಿಕಾರಿ ವರ್ಗ ಆಸಕ್ತಿ ತೋರಬೇಕು. ಇಲ್ಲದಿದ್ದರೆ ಸಮಸ್ಯೆ ಜಟಿಲಗೊಳ್ಳುವುದೇ ಹೊರತು ಪರಿಹಾರ ದೊರೆಯುವುದಿಲ್ಲ ಎಂಬುದು ಸಾರ್ವಜನಿಕರ ಅನಿಸಿಕೆ.
"

ಗಂಗಾವತಿಯಲ್ಲಿ ಫುಟ್​ಪಾತ್​ ತೆರವು ಮಾಡಲಾಗಿದೆ. ಕೊಪ್ಪಳದಲ್ಲಿ ಹಿಂದೆ ತೆರವಿಗೆ ಮುಂದಾಗಲಾಗಿತ್ತು. ವ್ಯಾಪಾರಿಗಳ ಹಿತವನ್ನೂ ಕಾಯಬೇಕಿದೆ. ಅವರಿಗೆ ಸೂಕ್ತ ಮಾರುಕಟ್ಟೆ ಒದಗಿಸಿಕೊಟ್ಟ ನಂತರ ತೆರವು ಮಾಡಲಾಗುವುದು. ಬೀದಿ ಬದಿ ವ್ಯಾಪಾರದಲ್ಲಿ ಹಲವು ವಿಧಗಳಿದ್ದು, ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.

— ಮಂಜುನಾಥ ಗುಂಡೂರು. ಡಿಯುಡಿಸಿ ಪಿಡಿ ಕೊಪ್ಪಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net