ತಾಲೂಕುಗಳನ್ನು ನಗರ, ಗ್ರಾಮೀಣ ಪ್ರದೇಶವಾಗಿ ವಿಭಾಗಿಸಿ ಮನೆಗಳ ಪಟ್ಟಿ ಮಾಡಲಾಗಿದೆ. ಒಟ್ಟು 2,523 ಬ್ಲಾಕ್ಗಳನ್ನು ರಚಿಸಲಾಗಿದೆ. 2,783 ಗಣತಿದಾರರನ್ನು ನೇಮಿಸಿದ್ದು, ಶೇ.10ರಷ್ಟು ಹೆಚ್ಚುವರಿ ಸಿಬ್ಬಂದಿ ನೇಮಿಸಲಾಗಿದೆ. 470 ಸೂಪರ್ವೈಸರ್ಸ್ಗಳಿದ್ದು ಒಟ್ಟು 3,253 ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ. ಕಂದಾಯ, ಶಿಕ್ಷಣ, ನಗರ&ಸ್ಥಳಿಯ ಸಂಸ್ಥೆ ನೌಕರರನ್ನು ಗಣತಿಗೆ ನೇಮಿಸಿದೆ. ಈಗಾಗಲೇ ತರಬೇತಿ, ಮಾಹಿತಿ ನೀಡುವಿಕೆ, ವಿವರ ಭರ್ತಿ ವಿಧಾನಗಳ ಬಗ್ಗೆ ಮಾಹಿತಿ ಒದಗಿಸಿದ್ದೇವೆ. ನಾನು ಜಿಲ್ಲೆಗೆ ಪ್ರಧಾನ ಗಣತಿ ಅಧಿಕಾರಿ, ಜಿಪಂ ಸಿಇಒ ಅಪರ ಪ್ರಧಾನ ಅಧಿಕಾರಿ, ಎಡಿಸಿ ಜಿಲ್ಲಾ ಗಣತಿ ಅಧಿಕಾರಿ, ಎಸಿ ಉಪ ವಿಭಾಗೀಯ ಗಣತಿ ಅಧಿಕಾರಿ, ತಹಸೀಲ್ದಾರ್ಗಳು ಚಾರ್ಜ್ ಗಣತಿ ಅಧಿಕಾರಿಗಳು, ನಗರ, ಸ್ಥಳಿಯ ಸಂಸ್ಥೆಗಳ ಪೌರಾಯುಕ್ತರು/ಮುಖ್ಯಾಧಿಕಾರಿಗಳು ಆಯಾ ನಗರ&ಸ್ಥಳಿಯ ಸಂಸ್ಥೆ ವ್ಯಾಪ್ತಿಯ ಚಾರ್ಜ್ ಗಣತಿ ಅಧಿಕಾರಿಗಳಾಗಿ ನಿಯೋಜನೆಗೊಂಡಿದ್ದಾಗಿ ಡಿಸಿ ತಿಳಿಸಿದರು.