ಕೊಪಣ ನಾಡಲಿ ಸಂವಿಧಾನ ಶಿಲ್ಪಿ ನೆನಹು

ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿಯಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು. ಪ್ರಮುಖರಾದ ಡಾ.ಬಸವರಾಜ ಕ್ಯಾವಟರ್​, ನವೀನ್​ ಗುಳಗಣ್ಣವರ, ಕರಿಯಪ್ಪ ಮೇಟಿ, ರತ್ನಾಕುಮಾರಿ, ಮಹಾಂತೇಶ ಮೈನಳ್ಳಿ ಇದ್ದರು.
ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿಯಲ್ಲಿ ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು. ಪ್ರಮುಖರಾದ ಡಾ.ಬಸವರಾಜ ಕ್ಯಾವಟರ್​, ನವೀನ್​ ಗುಳಗಣ್ಣವರ, ಕರಿಯಪ್ಪ ಮೇಟಿ, ರತ್ನಾಕುಮಾರಿ, ಮಹಾಂತೇಶ ಮೈನಳ್ಳಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧೆಡೆ ಆಚರಣೆ
  • ಭವ್ಯ ಮೆರವಣಿಗೆ
  • ಗಣ್ಯರಿಂದ ಪುಷ್ಪನ ನಮನ ಸಲ್ಲಿಕೆ
ಕೊಪ್ಪಳ : ಅಂಬೇಡ್ಕರ್​ ಜಯಂತಿ ಕೇವಲ ಆಚರಣೆಗೆ ಸೀಮಿತಗೊಳಿಸದೇ, ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂಬೇಡ್ಕರ್​ ಜಯಂತಿಯಲ್ಲಿ ಮಾತನಾಡಿದರು. 
ಕಾಂಗ್ರೆಸ್​ ಹಲವು ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ವಿನಾ ಕಾರಣ ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಅವಶ್ಯ. ಅದನ್ನು ಪ್ರಧಾನಿ ಮಾಡುತ್ತಿದ್ದಾರೆ. ಈ ಬಗ್ಗೆ ಟೀಕಿಸುವುದು ಸರಿಯಲ್ಲವೆಂದರು. 
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ಮಾತನಾಡಿ, ಸಂವಿಧಾನ ಇಂದು ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ನಮ್ಮ ಸರ್ಕಾರ ಅಂಬೇಡ್ಕರ್​ ಜೀವನ&ಸಾಧನೆ ಪರಿಚಯಿಸುವ ಉದ್ದೇಶದಿಂದ ಥೀಮ್​ ಪಾರ್ಕ್​ ನಿಮಾರ್ಣ ಮಾಡುತ್ತಿದೆ ಎಂದು ತಿಳಿಸಿದರು. 
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್​ ಗುಳಗಣ್ಣವರ ಮಾತನಾಡಿ, ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಅಂಬೇಡ್ಕರ್​ ಕೊಡುಗೆ ಎಂದು ನೆನೆದರು. 
ಪದಾಧಿಕಾರಿಗಳಾದ ಕರಿಯಪ್ಪ ಮೇಟಿ, ರತ್ನಾಕುಮಾರಿ, ಮಹಾಂತೇಶ ಮೈನಳ್ಳಿ, ಗಣೇಶ ಹೊರತಟ್ನಾಳ, ರಮೇಶ್​ ನಾಡಿಗೇರ್​, ಸುನಿಲ್​ ಹೆಸರೂರು, ಶಿವಕುಮಾರ ಅರಿಕೇರಿ, ನಾಗರಾಜ ಮುರಳಿ, ವಿರೇಶ ಸಜ್ಜನ್​ ಇತರರಿದ್ದರು.
ಜೆಡಿಎಸ್​ ಕಚೇರಿ : ನಗರದ ಜೆಡಿಎಸ್​ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಅಂಬೇಡ್ಕರ್​ ಜಯಂತಿ ಆಚರಿಸಲಾಯಿತು. ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ದುರ್ಬಲರ, ಅಸಹಾಯಕರ ಹಾಗೂ ತುಳಿತಕ್ಕೊಳಗಾದವರ ಬದುಕಿಗೆ ಬೆಳಕಾಗಿ ಸಹ ಬಾಳ್ವೆಯ ಭಾರತೀಯ ತತ್ವವನ್ನು ಎತ್ತಿ ಹಿಡಿದವರು ಅಂಬೇಡ್ಕರ್​. ಅವರು ಬುದ್ದನ ಪ್ರೇರಣೆ, ಬಸವಣ್ಣನ ಸಮಾನತೆ ಎರಡನ್ನೂ ಒಳಗೊಂಡಿದ್ದರು ಎಂದು ಅಭಿಪ್ರಾಯಪಟ್ಟರು. 
ಪಕ್ಷದ ಪದಾಧಿಕಾರಿಗಳಾದ ಕರಿಯಪ್ಪ ಹಾಲವರ್ತಿ, ಸುರೇಶ್​ ದದೆಗಲ್​, ಸೋಮನಗೌಡ ಹೊಗರನಾಳ, ನಿರ್ಮಲ ಮೇದಾರ, ರತ್ನಮ್ಮ ಹಿರೇಮಠ, ಮಾರುತಿಗೌಡ ಪೊಲೀಸ್​ ಪಾಟೀಲ್​, ಶಿವಕುಮಾರ್​ ಏಣಿಗಿ, ರತ್ನಮ್ಮ ಹಿರೇಮಠ, ಶಿವರಾಜ್​ ಮಠಪತಿ ಇತರರಿದ್ದರು. 
ಜ್ಞಾನಬಂಧು ಶಾಲೆ : ತಾಲೂಕಿನ ಭಾಗ್ಯನಗರ ಪಟ್ಟಣದ ಜ್ಞಾನ ಬಂಧು ಸಂಸ್ಥೆಯಲ್ಲಿ ಡಾ. ಬಿ.ಆರ್​.ಅಂಬೇಡ್ಕರ್​ ಜಯಂತಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ದಾನಪ್ಪ ಕವಲೂರು ಅಂಬೇಡ್ಕರ್​ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಉಪ ಪ್ರಾಚಾರ್ಯ ಮಂಜುನಾಥ ಚಿತ್ರಗಾರ ಸಂವಿಧಾನ ಮಹತ್ವ ತಿಳಿಸಿದರು. ಉಪನ್ಯಾಸಕ ರೇಣುಕಾರಾಜ, ಜೆ.ರವೀಂದ್ರ, ಮುಖ್ಯ ಶಿಕ್ಷಕಿ ಜ್ಯೋತಿ ಎಸ್​.ಎಸ್​., ಶಿಕ್ಷಕಿ ಸವಿತಾ, ಸಾವಿತ್ರಮ್ಮ, ಹೇಮಾ ಇತರರಿದ್ದರು. 
ಕೊಪ್ಪಳ ವಿವಿ : ಕುಕನೂರು ತಾಲೂಕಿನ ತಳಕಲ್​ನ ಕೊಪ್ಪಳ ವಿವಿಯಲ್ಲಿ ಮಂಗಳವಾರ ಅಂಬೇಡ್ಕರ್​ ಜಯಂತಿ ಆಚರಿಸಲಾಯಿತು. 
ಕುಲಪತಿ ಪ್ರೊ.ಎಸ್​.ವಿ. ಡಾಣಿ ಮಾತನಾಡಿ, ಸಮಾನತೆ, ಶಿಕ್ಷಣ, ಮಹಿಳಾ ಹಕ್ಕುಗಳು ಹಾಗೂ ಕಾರ್ಮಿಕರ ಕಲ್ಯಾಣ ಅಂಬೆಡ್ಕರ್​ ಕನಸುಗಳಾಗಿದ್ದವು. ಪ್ರತಿಯೊಬ್ಬರೂ ಇವುಗಳ ಮಹತ್ವ ಅರಿತು ನಡೆಯಬೇಕು ಎಂದರು.ಕುಲಸಚಿವ ಪ್ರೊ.ಕೆ.ರಮೇಶ, ಕನ್ನಡ ವಿಭಾಗದ ಪ್ರಾಧ್ಯಾಪಕ ವಿರೇಶ ಉತ್ತಂಗಿ, ಪಾರ್ವತಿ ಕನಕಗಿರಿ, ಪ್ರವಿಣ ಪಾಟೀಲ್​, ಅನಂತ ಕುಮಾರ ದೊರೆ, ಮೌಲಾಸಾಬ್​, ಮಂಜುನಾಥ ಪೂಜಾರ, ಸೃಷ್ಟಿ ಕಾವಳ್ಕರ್​, ಅಲ್ತಾಫ್​ ಹುಸೇನ್​, ನಾಗರಾಜ ಇತರರಿದ್ದರು.
ಸಂವಿಧಾನ ಪ್ರಸ್ತಾವನೆ ಅನಾವರಣ : ಅಂಬೇಡ್ಕರ್​ ಜಯಂತಿ ಅಂಗವಾಗಿ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ನಿರ್ಮಿಸಿದ ಸಂವಿಧಾನ ಪ್ರಸ್ತಾವನೆ ಪ್ರತಿರೂಪವನ್ನು ಸಂಸದ ರಾಜಶೇಖರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ ಅನಾವರಣಗೊಳಿಸಿದರು. ಬಳಿಕ ಉದ್ಯಾನದಲ್ಲಿನ ಅಂಬೇಡ್ಕರ್​ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಜಿಪಂ ಸಿಇಒ ವರ್ಣಿತ್​ ನೇಗಿ , ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಡಿಎಸ್​ ಟಿ.ಕೃಷ್ಣಮೂರ್ತಿ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net