ಧರ್ಮದ ನೆಲೆಯಾಗಿದೆ ಕಿಷ್ಕಿಂಧಾ ಕ್ಷೇತ್ರ

ಗಂಗಾವತಿ ಶ್ರೀಯೋಗೀಶ್ವರ ಯಾಜ್ಞವಲ್ಕ ದೇವಾಲಯದಲ್ಲಿ ಅಧಿಕ ಮಾಸದ ನಿಮಿತ್ತ ದೇವಾಲಯ ಸಮಿತಿಯಿಂದ ಹಮ್ಮಿಕೊಂಡ ಜ್ಞಾನ ಸತ್ರ ಕಾರ್ಯಕ್ರಮ ನಡೆಯಿತು. ಹುಣಸಿಹೊಳೆ ಕಣ್ವಮಠದ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥರು, ದೇವಾಲಯ ಸಮಿತಿ ಅಧ್ಯಕ್ಷ ಮುರಳೀಧರ ಗಂಗನಾಳ, ವಿಪ್ರ ಸಮಾಜದ ಪ್ರಮುಖರಾದ ರಾಘವೇಂದ್ರ ಮೇಗೂರು, ಗೋಪಿನಾಥ ದಿನ್ನಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಧಾರ್ಮಿಕ
  • ಆಧ್ಯಾತ್ಮ
  • ಚಟುವಟಿಕೆ
ಕಣ್ವಮಠದ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥರು ಹೇಳಿಕೆ ಜ್ಞಾನ ಸತ್ರ ಕಾರ್ಯಕ್ರಮ
ಗಂಗಾವತಿ: ಜ್ಞಾನ ಸತ್ರಗಳು ಧಾರ್ಮಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದು, ಯುವ ಸಮುದಾಯವನ್ನು ಧಾರ್ಮಿಕ ಕಾರ್ಯಕ್ರಮಗಳತ್ತ ಪ್ರೇರೇಪಿಸಬೇಕಿದೆ ಎಂದು ಹುಣಸಿಹೊಳೆ ಕಣ್ವಮಠದ ಶ್ರೀ ವಿದ್ಯಾ ಕಣ್ವ ವಿರಾಜತೀರ್ಥರು ಹೇಳಿದರು.
ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕ ದೇವಾಲಯದಲ್ಲಿ ಅಧಿಕ ಮಾಸದ ನಿಮಿತ್ತ ದೇವಾಲಯ ಸಮಿತಿಯಿಂದ ಹಮ್ಮಿಕೊಂಡ ಜ್ಞಾನ ಸತ್ರ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಕಿಷ್ಕಿಂಧಾ ಕ್ಷೇತ್ರ ಗಂಗಾವತಿಯಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮ ಚಟುವಟಿಕೆಗಳು ನಿರಂತರವಾಗಿದ್ದು, ದೇವಾಲಯ ಸಮಿತಿ ಸದಸ್ಯರು ಅಧಿಕ ಮಾಸದ ನಿಮಿತ್ತ 33ದಿನ ಜ್ಞಾನ ಸತ್ರ ಆಯೋಜಿಸಿದ್ದು ಪ್ರಶಂಸನೀಯ. ಭತ್ತದ ನಾಡು ಕಿಷ್ಕಿಂಧಾ ಕ್ಷೇತ್ರ ಧರ್ಮದ ನೆಲೆಯಾಗಿದೆ ಎಂದರು.
ದೇವಾಲಯ ಸಮಿತಿ ಅಧ್ಯಕ್ಷ ಮುರಳೀಧರ ಗಂಗನಾಳ ಮಾತನಾಡಿ, ಅಧಿಕ ಮಾಸದ ನಿಮಿತ್ತ ಶ್ರೀಗಳು ಜೂ.13ರಿಂದ 15ರವರೆಗೆ ಗಂಗಾವತಿಯಲ್ಲಿ ವಾಸ್ತವ್ಯ ಇರಲಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಸಾನ್ನಿಧ್ಯವಹಿಸಲಿದ್ದಾರೆ ಎಂದರು.
ವಿಪ್ರ ಸಮಾಜದ ಪ್ರಮುಖರಾದ ರಾಘವೇಂದ್ರ ಮೇಗೂರು, ಗೋಪಿನಾಥ ದಿನ್ನಿ, ಗುರುರಾಜ ಚಿರ್ಚನಗುಡ್ಡ, ತಿರುಮಲರಾವ್ ಆಲ್ಲಂಪಲ್ಲಿ, ರಾಘವೇಂದ್ರ ಲೆಕ್ಕಿಹಾಳ್, ವಿ.ಸತ್ಯಕುಮಾರ, ಶೇಷಗಿರಿ ಕುಲ್ಕರ್ಣಿ, ರಂಗನಾಥ ವಟಗಲ್, ಪ್ರಹ್ಲಾದ ಕೋಮಲಾಪುರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net