ನಗರಸಭೆ ಭ್ರಷ್ಟಚಾರ ತನಿಖೆಗೆ ಅಗ್ರಹ

ನಗರಸಭೆ ಭ್ರಷ್ಟಚಾರದ ಸೂಕ್ತ ತನಿಖೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ನವ ನಿಮಾರ್ಣ ಸೇನೆ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರಗೆ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷ ವಿಜಯ ಕುಮಾರ ಕವಲೂರ, ತಾಲೂಕು ಅಧ್ಯಕ್ಷ ಮಹೇಶ ಅಲ್ಲಾನಗರ, ಪದಾಧಿಕಾರಿಗಳಾದ ಶಿವಕುಮಾರ ಏಣಗಿ ಇದ್ದರು.
ನಗರಸಭೆ ಭ್ರಷ್ಟಚಾರದ ಸೂಕ್ತ ತನಿಖೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ನವ ನಿಮಾರ್ಣ ಸೇನೆ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರಗೆ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷ ವಿಜಯ ಕುಮಾರ ಕವಲೂರ, ತಾಲೂಕು ಅಧ್ಯಕ್ಷ ಮಹೇಶ ಅಲ್ಲಾನಗರ, ಪದಾಧಿಕಾರಿಗಳಾದ ಶಿವಕುಮಾರ ಏಣಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ನವ ನಿಮಾರ್ಣ ಸೇನೆ ಜಿಲ್ಲಾ ಘಟಕ ಮನವಿ
ಕೊಪ್ಪಳ : ನಗರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ಜರಗುತ್ತಿದ್ದು, ಸೂಕ್ತ ತನಿಖೆಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಹಾಗೂ ಖಾಸಗಿ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೋಮವಾರ ಕರ್ನಾಟಕ ನವ ನಿಮಾರ್ಣ ಸೇನೆ ಜಿಲ್ಲಾ ಘಟಕದಿಂದ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರಗೆ ಮನವಿ ಸಲ್ಲಿಸಲಾಯಿತು.
ನಗರಸಭೆಯಲ್ಲಿನ ಹಣ ದುರ್ಬಳಕೆಯಾದ ಬಗ್ಗೆ ಅಪರ ಜಿಲ್ಲಾಧಿಕಾರಿಗೆ ದಾಖಲೆ ಸಮೇತ ಮಾಹಿತಿ ನೀಡಿ. ಡಿಸಿ ಡಾ. ಸುರೇಶ ಬಿ. ಇಟ್ನಾಳಗೆ ದೂರವಾಣಿ ಮೂಲಕ ಮಾತನಾಡಿದಾಗ ಅವರು ದಾಖಲೆ ಸಮೇತ ದೂರು ಕೊಟ್ಟರೆ ಖಂಡಿತ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಹಣ ಮರುಕಳಿಸುವ ಪ್ರಯತ್ನ ಮಾಡುತ್ತೆನೆ ಎಂದು ಭರವಸೆ ನೀಡಿದರು. ಕರ್ನಾಟಕ ನವ ನಿಮಾರ್ಣ ಸೇನೆ ಹೋರಾಟಕ್ಕೆ ಜಿಲ್ಲಾಧಿಕಾರಿಗಳಿಂದ ಸೂಕ್ತ ಪ್ರತಿಕ್ರೀಯೆ ದೊರೆತಿದೆ.
ನಗರದ ಜನತೆಯು ಕಟ್ಟುವ ತೆರಿಗೆ ಹಣ ದುರ್ಬಳಕೆಯಾಗುವುದನ್ನು ತಡೆಗಟ್ಟುವುದು ಸಂಘಟನೆಯ ಗುರಿಯಾಗಿದೆ. ನಗರಸಭೆಯಲ್ಲಿನ ನೂರಾರು ಕಾಮಗಾರಿಯಲ್ಲಿ ಹಣ ದುರ್ಬಳಕೆಯಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳದೆ ಇದ್ದರೆ ನಮ್ಮ ಸಂಘಟನೆಯು ಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತದೆ ಹಾಗೂ ನಗರಸಭೆ ಮುಂದೆ ಪ್ರತಿಭಟನೆ ಮಾಡುವುದಾಗಿ ಸಂಘಟನೆ ಎಚ್ಚರಿಸಿತು.
ಕರ್ನಾಟಕ ನವ ನಿಮಾರ್ಣ ಸೇನೆ ಜಿಲ್ಲಾಧ್ಯಕ್ಷ ವಿಜಯ ಕುಮಾರ ಕವಲೂರ, ತಾಲೂಕು ಅಧ್ಯಕ್ಷ ಮಹೇಶ ಅಲ್ಲಾನಗರ, ಪದಾಧಿಕಾರಿಗಳಾದ ಶಿವಕುಮಾರ ಏಣಗಿ, ಗಂಗಾಧರ ವಸ್ತ್ರದ, ಮರಿಯಪ್ಪ ಮಂಗಳೂರು, ವಿನಾಯಕ ಪಾಸ್ತೆ, ಪ್ರವಿಣ ಗೌಡ, ನಾಗರಾಜ ನೀಲಗಿರಿ, ರಾಮು ಗೋಂದಕರ, ಆನಂದ ಮಡಿವಾಳರ, ಪತ್ರಯ್ಯ ಹಿರೇಮಠ, ಶಿವಕುಮಾರ ನೀಲಗಿರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net