ಕ್ಯಾದಿಗುಪ್ಪಾ ಕ್ರಾಸ್ನಿಂದ ಆರಂಭಿಸಿ ವಿವಿಧ ಢಾಬಾಗಳಿಗೆ ತೆರಳಿ ಅರಿವು ಮೂಡಿಸಿದರು. ಬಹುತೇಕ ಕಡೆ ಕನ್ನಡ ನಾಮಲಕ ಇರಲಿಲ್ಲ. ರಾಜ್ಯ ಸರ್ಕಾರ ಕಡ್ಡಾಯ ಕನ್ನಡ ಆದೇಶ ಮಾಡಿದೆ. ವ್ಯಾಪಾರ, ವಾಣಿಜ್ಯ ಕೇಂದ್ರಗಳು ಸೇರಿದಂತೆ ವಿವಿಧ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಕೆ ಮಾಡಬೇಕು. ಅಂಗಡಿ ಮಾಲೀಕರಿಗೆ ಈ ಬಗ್ಗೆ ತಿಳಿಸಿ ಮೂರು ದಿನದೊಳಗೆ ಕಡ್ಡಾಯವಾಗಿ ಕನ್ನಡ ಅಕ್ಷರ ಬರೆಸಲು ತಿಳಿಸಿದರು. ಕರವೇ ತಾಲೂಕು ಅಧ್ಯಕ್ಷ ಪ್ರಕಾಶ ಮನ್ನೇರಾಳ, ಕಾರ್ಯಕರ್ತರಾದ ಶರಣಬಸವ ಕಂದಕೂರ, ಮಲ್ಲಿಕಾರ್ಜುನ ಬಡಿಗೇರ, ಜಾವೇದ್ ಕಾಟೇವಾಡಿ, ಯಮನೂರಸಾಬ ಬನ್ನಿಗೋಳ, ಪೀರಮಹ್ಮದ್ ಇತರರಿದ್ದರು.