ಕೊಪ್ಪಳ ಕರವೇ ಟಕದಿಂದ ಅಕ್ರಮ ಮಧ್ಯ ಮಾರಾಟವನ್ನು ತಡೆಗಟ್ಟುವಂತೆ ಆಗ್ರಹಿಸಿ ಜಿಲ್ಲಾಡಳಿತ ಭವಮನದ ಮುಂದಿನ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಕರವೇ ಪದಾಧಿಕಾರಿಗಳಾದ ಬಸನಗೌಡ ಪೋ.ಪಾಟೀಲ, ಬಿ. ಗಿರೀಶಾನಂದ ಜ್ಞಾನಸುಂರ, ಭುವನೇಶ್ವರಿ ಮೊಟಗಿ, ಹುಸೇನಬಾಶಾ ಮಣ್ಣೂರು, ಕಲ್ಲಯ್ಯ ಹಿರೇಮಠ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕರವೇಯಿಂದ ಮನವಿ ಸಲ್ಲಿಕೆ
ಕೊಪ್ಪಳ : ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಕ್ರಮ ಮದ್ಯ ರಫ್ತು-ಆಮದು ಮತ್ತು ಅನಧಿಕೃತ ಮಾರಾಟ ಹೆಚ್ಚಾಗುತ್ತಿದ್ದು, ಸರ್ಕಾರದ ನಿಯಮ ಉಲ್ಲಂಘಿಸುತ್ತಿರುವ ಸಿಎಲ್-2 ಮಳಿಗೆಗಳ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಆಗ್ರಹಿಸಿ ಸೋಮವಾರ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರಗೆ ಮನವಿ ಸಲ್ಲಿಸಿತು.
ಜಿಲ್ಲೆಯಾದ್ಯಂತ ರಾಜಾರೋಷವಾಗಿ ಪಾನ್ಬೀಡಾ ಅಂಗಡಿಗಳು ಹಾಗೂ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ, ಬಿಯರ್ ಮತ್ತು ವೈನ್ ಸಾಗಣೆ ಹಾಗೂ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು. ಯುವಕರು ದುಶ್ಚಟಕ್ಕೆ ಒಳವಾಗಿತ್ತಿದ್ದಾರೆ, ಅಲ್ಲದೇ ಕೃಷಿ ಕಾರ್ಮಿಕರು, ದಿನಗೂಲಿ ನೌಕರರು ಮತ್ತು ವಯೋವೃದ್ಧರ ಬದುಕಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಕೆಲ ಸಿಎಲ್-2 ಪರವಾನಗಿ ಹೊಂದಿದ ಅಂಗಡಿಗಳು ರಾಜ್ಯ ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಕೌಂಟರ್ನಿಂದಲೇ ಗ್ರಾಹಕರ ಟೇಬಲ್ಗಳಿಗೆ ಮದ್ಯ ಸರಬರಾಜು ಮಾಡುತ್ತಿವೆ. ಚಿಲ್ಲರೆ ಮಾರಾಟಕ್ಕೆ ಮಾತ್ರ ಅವಕಾಶವಿದ್ದರೂ, ಸಿಎಲ್-9 ಬಾರ್ ಮತ್ತು ರೆಸ್ಟೋರೆಂಟ್ ಮಾದರಿಯಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸಲಾಗುತ್ತಿದೆ. ಜನವಸತಿ ಪ್ರದೇಶಗಳಲ್ಲಿ ಈ ಮಳಿಗೆಗಳಿಂದ ಮಹಿಳೆಯರು, ಮಕ್ಕಳಿಗೆ ತೊಂದರೆಯಾಗುತ್ತದೆ. ಅಗತ್ಯ ಅಬಕಾರಿ ಸತ್ಯಾಪನಾ ಪತ್ರ ಪಡೆಯದೇ ನಿಯಮ ಉಲ್ಲಂಘಿಸಿ ಸರ್ಕಾರಕ್ಕೆ ತೆರಿಗೆ ನಷ್ಟವಾಗುತ್ತಿದೆ. ಅಕ್ರಮದ ಬಗ್ಗೆ ಕ್ರಮ ಕೈಗೊಂಡು ತಪ್ಪಿತಸ್ಥರ ಪರವಾನಿಗೆಯನ್ನು ರದ್ದುಗೊಳಿಸಿ ದಂಡ ವಸೂಲಾತಿ ಮಾಡಬೇಕು ಎಂದು ಆಗ್ರಹಿಸದರು.
ಕರವೇ ರಾಜ್ಯ ಸಂ, ಕಾರ್ಯದರ್ಶಿ ಬಸನಗೌಡ ಪೋ.ಪಾಟೀಲ, ಜಿಲ್ಲಾಧ್ಯಕ್ಷ ಬಿ. ಗಿರೀಶಾನಂದ ಜ್ಞಾನಸುಂರ, ಮಹಿಳಾಘಟಕ ಅಧ್ಯಕ್ಷೆ ಭುವನೇಶ್ವರಿ ಮೊಟಗಿ, ಪದಾಧಿಕಾರಿಗಳಾದ ಹುಸೇನಬಾಶಾ ಮಣ್ಣೂರು, ಕಲ್ಲಯ್ಯ ಹಿರೇಮಠ, ವಿರೇಶ ಮುಂಡಾಸದ, ಸಾಯಿಕುಮಾರ ಅಳ್ಳಳ್ಳಿ, ಶ್ರೀಧರ ಭೂತಣ್ಣವರ, ಹನುಮಂತ ಬೆಸ್ತರ ಇತರರಿದ್ದರು.