ಕನಕಗಿರಿ ಲಕ್ಷ್ಮೀದೇವಿಗೆ ಬೆಳ್ಳಿ ಆಭರಣಗಳ ಸಿಂಗಾರ

ಕನಕಗಿರಿಯ ಶ್ರೀ ಕನಕಾಚಲ ದೇವಸ್ಥಾನದ ಲಕ್ಷ್ಮೀ ದೇವರ ಗುಡಿಯಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ನಿಮಿತ್ತ ವಿಶೇಷ ಅಲಂಕಾರ ಮಾಡಲಾಗಿತ್ತು.
ಕನಕಗಿರಿಯ ಶ್ರೀ ಕನಕಾಚಲ ದೇವಸ್ಥಾನದ ಲಕ್ಷ್ಮೀ ದೇವರ ಗುಡಿಯಲ್ಲಿ ಶುಕ್ರವಾರ ವರಮಹಾಲಕ್ಷ್ಮೀ ಪೂಜೆ ನಿಮಿತ್ತ ವಿಶೇಷ ಅಲಂಕಾರ ಮಾಡಲಾಗಿತ್ತು.
Published on

ಕನಕಗಿರಿ: ಐತಿಹಾಸಿಕ ಶ್ರೀ ಕನಕಾಚಲಪತಿ ದೇವಸ್ಥಾನದ ಲಕ್ಷ್ಮೀ ಗುಡಿಯಲ್ಲಿ ಮೂರನೇ ಶ್ರಾವಣ ಶುಕ್ರವಾರ ನಿಮಿತ್ತ ವರಮಹಾಲಕ್ಷ್ಮೀ ಪೂಜೆಯನ್ನು ಸಡಗರದಿಂದ ನೆರವೇರಿಸಲಾಯಿತು.

ರಾತ್ರಿ ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಬೆಳ್ಳಿ ಆಭರಣಗಳು, ಬಗೆಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು. ಅರ್ಚಕರಾದ ಮಧುರಕವಿ ಹಾಗೂ ವಿ. ಸಿಂಗರಾಚಾರು ಮಹಾಮಂಗಳಾರತಿ ಮಾಡಿದರು. ಮಹಿಳೆಯರಿಗೆ ಸಂಪ್ರದಾಯದಂತೆ ಅರಿಶಿಣ, ಕುಂಕುಮದ ಜತೆಗೆ ಹಸಿರು ಬಳೆಗಳನ್ನು ನೀಡಲಾಯಿತು. 

ಶ್ರೀ ಕನಕಾಚಲ ಭಜನಾ ಮಂಡಳಿಯಿಂದ ಭಜನೆ ಮಾಡಲಾಯಿತು. ದೇವಸ್ಥಾನದ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ, ಗೋಪಾಲರೆಡ್ಡಿ, ಗುಂಡಪ್ಪ ಚಿತ್ರಗಾರ, ನಾಗರಾಜ ಚಿತ್ರಗಾರ, ಶ್ರೀನಿವಾಸರೆಡ್ಡಿ ಓಣಿಮನಿ ಇತರರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net