ಕನಕಗಿರಿ ಉತ್ಸವಕ್ಕೆ ಭರದ ಸಿದ್ಧತೆ

ಕನಕಗಿರಿ ಉತ್ಸವ ನಿಮಿತ್ತ ಡ್ರೋನ್ ಹಾರಿಸುವ ಸ್ಥಳವನ್ನು ತಹಸೀಲ್ದಾರ್ ವಿಶ್ವನಾಥ ಮುರುಡಿ ಸೋಮವಾರ ವೀಕ್ಷಿಸಿದರು. ಜೆಇ ಮಂಜುನಾಥ, ಪೇದೆ ಸಿದ್ರಾಮಪ್ಪ ಇತರರಿದ್ದರು.
ಕನಕಗಿರಿ ಉತ್ಸವ ನಿಮಿತ್ತ ಡ್ರೋನ್ ಹಾರಿಸುವ ಸ್ಥಳವನ್ನು ತಹಸೀಲ್ದಾರ್ ವಿಶ್ವನಾಥ ಮುರುಡಿ ಸೋಮವಾರ ವೀಕ್ಷಿಸಿದರು. ಜೆಇ ಮಂಜುನಾಥ, ಪೇದೆ ಸಿದ್ರಾಮಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೇದಿಕೆ ನಿರ್ಮಾಣ, ಹೆಲಿಪ್ಯಾಡ್, ಲೈಟಿಂಗ್ ಅಳವಡಿಕೆ ಕಾರ್ಯ ಜೋರು
  • ತಹಸೀಲ್ದಾರರಿಂದ ಪರಿಶೀಲನೆ
ಕನಕಗಿರಿ: ಐತಿಹಾಸಿಕ ಕನಕಗಿರಿ ಉತ್ಸವ 2026ಕ್ಕೆ ದಿನಗಣನೆ ಆರಂಭವಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಸೋಮವಾರ ವೇದಿಕೆ ನಿರ್ಮಾಣ, ಹೆಲಿಪ್ಯಾಡ್, ಲೈಟಿಂಗ್ ಅಳವಡಿಕೆ ಕಾರ್ಯ ಆರಂಭಿಸಿದ್ದು, ತಹಸೀಲ್ದಾರ್ ನೇತೃತ್ವದ ತಂಡವು ಪರಿಶೀಲನೆ ನಡೆಸಿತು.
ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಜೆಇ ಮಂಜುನಾಥ ಇತರ ಅಧಿಕಾರಿಗಳ ತಂಡವು ಜನಪ್ರತಿನಿಧಿಗಳು ಆಗಮಿಸುವ ಹೆಲಿಪ್ಯಾಡ್ ಸ್ಥಳದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ತಾವರಗೇರಾ ರಸ್ತೆಯಲ್ಲಿ ಸಾರ್ವಜನಿಕರು ಹೆಲಿಕಾಪ್ಟರ್‌ನಲ್ಲಿ ಪಟ್ಟಣ ವೀಕ್ಷಿಸುವ ಸಲುವಾಗಿ ನಿರ್ಮಿಸುತ್ತಿರುವ ಹೆಲಿಪ್ಯಾಡ್ ಸ್ಥಳ ಪರಿಶೀಲಿಸಿದರು. ಅಲ್ಲದೇ, ಗ್ಯಾರಂಟಿ ಫಲಾನುಭವಿಗಳನ್ನು ಹೊತ್ತು ತರುವ ಬಸ್‌ಗಳ ಪಾರ್ಕಿಂಗ್ ಸ್ಥಳವನ್ನು ಪೊಲೀಸರೊಂದಿಗೆ ಅಂತಿಮಗೊಳಿಸಲಾಯಿತು.
ಮುದಗಲ್-ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿ ಮೈಸೂರು ಮಾದರಿಯಲ್ಲಿ ಲೈಟಿಂಗ್ ಅಳವಡಿಕೆಯಲ್ಲಿ ಕಾರ್ಮಿಕರು ತೊಡಗಿಸಿಕೊಂಡಿದ್ದಾರೆ. ಆದರೆ, ಈ ರಸ್ತೆಯಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರ ಹೆಚ್ಚಿದ್ದರಿಂದ ಇನ್ನಷ್ಟು ಎತ್ತರದಲ್ಲಿ ಅಳವಡಿಸಲು ಹಾಗೂ ಸಾರ್ವಜನಿಕರ ಊಟದ ಸ್ಥಳವನ್ನು ಶುಚಿಗೊಳಿಸಲು ತಹಸೀಲ್ದಾರ್ ಸೂಚಿಸಿದರು.
ಕಾರ್ಯಕ್ರಮ ವೀಕ್ಷಣೆಗೆ ಆಗಮಿಸುವ ನಾಗರಿಕರ ವಾಹನಗಳ ಪಾರ್ಕಿಂಗ್, ಹೆಲಿಪ್ಯಾಡ್, ಡ್ರೋನ್ ಕಾರ್ಯಕ್ರಮ, ಊಟದ ಸ್ಥಳಗಳಲ್ಲಿ ಸೂಕ್ತ ಬ್ಯಾರಿಕೇಡ್ ಅಳವಡಿಸಲು ತಹಸೀಲ್ದಾರ್ ಸೂಚಿಸಿದರು.
ಮೆರವಣಿಗೆಗಾಗಿ ಅಂಬಾರಿ ವ್ಯವಸ್ಥೆ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಎಡಿ ಡಾ.ಹುಲಗಪ್ಪರಿಂದ ಮಾಹಿತಿ ಸಂಗ್ರಹಿಸಿದರು. ಹೆಲಿಪ್ಯಾಡ್, ಊಟದ ಸ್ಥಳ, ವೇದಿಕೆ, ಮೆರವಣಿಗೆ ವೇಳೆ ಕುಡಿವ ನೀರಿನ ಸಮಸ್ಯೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮೀಣ ಕುಡಿವ ನೀರಿನ ಎಇಇ ದೇವಪ್ಪ ಕಟ್ಟಿಮನಿಗೆ ನಿರ್ದೇಶಿಸಿದರು. ಎಲ್ಲಿ ವಿದ್ಯುತ್ ಸಂಪರ್ಕದ ಅವಶ್ಯಕತೆ ಇದೆ ಅಲ್ಲಲ್ಲಿ ಸಂಪರ್ಕ ಒದಗಿಸಲು ಸ್ಥಳದಲ್ಲಿದ್ದ ಜೆಸ್ಕಾಂ ಎಇಇ ಮಂಜುನಾಥರಿಗೆ ಸೂಚಿಸಿದರು. 35 ಊಟದ ಕೌಂಟರ್‌ಗಳು, ಅಡುಗೆಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಸಚಿವರ ಆಪ್ತ ಸಹಾಯಕ ವೆಂಕಟೇಶ ಇವೆಂಟ್ ಜವಾಬ್ಧಾರಿ ಹೊತ್ತ ಅಕ್ಷಯಕುಮಾರಗೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net