ಕನಕಗಿರಿ ಉತ್ಸವದಲ್ಲಿ ನೀರು-ಬೆಳಕಿನ ವ್ಯವಸ್ಥೆ

ಕನಕಗಿರಿ ಉತ್ಸವ ನಿಮಿತ್ತ ಪಪಂ ಅಧ್ಯಕ್ಷೆ ತನುಜಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಶೇಷಪ್ಪ ಪೂಜಾರ, ರಾಜಾಸಾಬ್ ನಂದಾಪುರ ಮಾತನಾಡಿದರು. ನೂರಸಾಬ್ ಗಡ್ಡಿಗಾಲ, ಶರಣೇಗೌಡ ಇತರರಿದ್ದರು.
ಕನಕಗಿರಿ ಉತ್ಸವ ನಿಮಿತ್ತ ಪಪಂ ಅಧ್ಯಕ್ಷೆ ತನುಜಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಶೇಷಪ್ಪ ಪೂಜಾರ, ರಾಜಾಸಾಬ್ ನಂದಾಪುರ ಮಾತನಾಡಿದರು. ನೂರಸಾಬ್ ಗಡ್ಡಿಗಾಲ, ಶರಣೇಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಹೇಳಿಕೆ
  • ರಸ್ತೆ ವಿಸ್ತರಣೆಗೆ ಸದಸ್ಯರಿಂದ ಒತ್ತಾಯ
ಕನಕಗಿರಿ: ಕನಕಗಿರಿ ಉತ್ಸವದಲ್ಲಿ ಮೂಲಸೌಕರ್ಯ ಕಲ್ಪಿಸುವ ಹಿನ್ನೆಲೆಯಲ್ಲಿ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಅಧ್ಯಕ್ಷೆ ತನುಜಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಮಾತನಾಡಿ, ಉತ್ಸವಕ್ಕೆ ಬರುವ ಜನರಿಗೆ ಕುಡಿವ ನೀರು, ಬೆಳಕಿನ ವ್ಯವಸ್ಥೆ ಮಾಡಲಾಗುವುದು. ಅಭಿವೃದ್ಧಿಗೆ ಸಂಬಂಧಿಸಿದಂತೆ ಇಲಾಖೆಗಳ ಜತೆ ಪತ್ರ ವ್ಯವಹಾರ ನಡೆಸಿ ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಡಿಸಿ, ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಿರ್ಣಯ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಪಟ್ಟಣ ಹೊರವಲಯದ ನಾಲ್ಕು ರಸ್ತೆಗಳಲ್ಲಿನ ಸ್ವಾಗತ ಕಮಾನುಗಳನ್ನು ಸರಿಪಡಿಸಲು ರಾಜಾಸಾಬ್ ನಂದಾಪುರ ಆಗ್ರಹಿಸಿದಾಗ ಬಹುತೇಕ ಸದಸ್ಯರು ಬೆಂಬಲಿಸಿದರು. ಆಗ ಇಒ ನವೀಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದರು.
ಅನಿಲ ಬಿಜ್ಜಳ ಮತ್ತು ಸಂಗಪ್ಪ ಸಜ್ಜನ್ ಮಾತನಾಡಿ, ವಾಲ್ಮೀಕಿ ವೃತ್ತದಿಂದ ಬಸ್ ನಿಲ್ದಾಣ, ಕನಕಾಚಲಪತಿ ದೇವಸ್ಥಾನಕ್ಕೆ ಕಲ್ಪಿಸುವ ರಸ್ತೆಯ ವಿಸ್ತರಣೆ ಮುಖ್ಯವಾಗಿದೆ. ನಿಲ್ದಾಣಕ್ಕೆ ಹೋಗುವ ಬಸ್ಸುಗಳು ಇಕ್ಕಟ್ಟಿನಲ್ಲಿ ಸಾಗುತ್ತಿವೆ. ತಿರುವಿನಲ್ಲಿ ಅಪಘಾತಗಳು ನಡೆದಿವೆ. ಸಂಬಂಧಪಟ್ಟವರಿಗೆ ಪತ್ರ ಬರೆದು ಈ ಸಮಸ್ಯೆ ನಿವಾರಿಸಿ ಜನರ ಹಿತ ಕಾಪಾಡಬೇಕು ಎಂದರು.
ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಸುರೇಶ ಗುಗ್ಗಳಶೆಟ್ಟರ, ಸಿದ್ದೇಶ ಕಲುಬಾಗಿಲಮಠ, ನೂರಸಾಬ್ ಗಡ್ಡಿಗಾಲ, ಶರಣೇಗೌಡ, ಹನುಮಂತ ಬಸರಿಗಿಡ, ಶೇಷಪ್ಪ ಪೂಜಾರ, ರಾಕೇಶ ಕಂಪ್ಲಿ, ನಂದಿನಿ ರಾಮಾಂಜನೇಯರೆಡ್ಡಿ, ಶೈನಜಾಬೇಗಂ ಗುಡಿಹಿಂದಲ, ಜೆಇ ಮಂಜುನಾಥ ಸೇರಿ ಸಿಬ್ಬಂದಿ ವರ್ಗದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net