ಕನಕಾಚಲ ದೇಗುಲ ಹುಂಡೀಲಿ 4.52 ಲಕ್ಷ ರೂ. ಸಂಗ್ರಹ

ಕನಕಗಿರಿ ಶ್ರೀ ಕನಕಾಚಲ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡುತ್ತಿರುವ ಕಂದಾಯ ಸಿಬ್ಬಂದಿ. ಶಿರಸ್ತೇದಾರರಾದ ಅನಿತಾ ಇಂಡಿ, ಸುನೀಲ್, ಪೇದೆ ದೇವರಾಜ್ ಇತರರಿದ್ದರು.
ಕನಕಗಿರಿ ಶ್ರೀ ಕನಕಾಚಲ ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡುತ್ತಿರುವ ಕಂದಾಯ ಸಿಬ್ಬಂದಿ. ಶಿರಸ್ತೇದಾರರಾದ ಅನಿತಾ ಇಂಡಿ, ಸುನೀಲ್, ಪೇದೆ ದೇವರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ವಿಶ್ವನಾಥ ಮುರುಡಿ ನೇತೃತ್ವದಲ್ಲಿ ಎಣಿಕೆ
  • 6 ಹುಂಡಿಗಳಲ್ಲಿ 50 ದಿನಗಳಲ್ಲಿ ಸಂಗ್ರಹ
ಕನಕಗಿರಿ: ಪಟ್ಟಣದ ಐತಿಹಾಸಿಕ ಶ್ರೀ ಕನಕಾಚಲ ದೇವಸ್ಥಾನದ ಹುಂಡಿಗಳನ್ನು ಮಂಗಳವಾರ ತಹಸೀಲ್ದಾರ್ ವಿಶ್ವನಾಥ ಮುರುಡಿ ನೇತೃತ್ವದಲ್ಲಿ ತೆರೆದು ಹಣ ಎಣಿಕೆ ಮಾಡಲಾಯಿತು. ಜಾತ್ರೆ ಬಳಿಕ ಅಂದರೆ ಕಳೆದ ಮಾ.26ರಂದು ಕಾಣಿಕೆ ಪೆಟ್ಟಿಗೆ ಹಣ ಎಣಿಕೆ ಮಾಡಲಾಗಿತ್ತು.
ನಂತರ 6 ಹುಂಡಿಗಳಲ್ಲಿ 50 ದಿನಗಳಲ್ಲಿ 4.52 ಲಕ್ಷ ರೂ. ಸಂಗ್ರಹವಾಗಿದ್ದು, ದೇವಸ್ಥಾನದ ಖಾತೆಗೆ ಜಮಾ ಮಾಡಲಾಗಿದೆ ಎಂದು ದೇವಸ್ಥಾನ ವ್ಯವಸ್ಥಾಪಕ ಸಿದ್ದಲಿಂಗಯ್ಯಸ್ವಾಮಿ ತಿಳಿಸಿದ್ದಾರೆ. ಶಿರಸ್ತೇದಾರರಾದ ಅನಿತಾ ಇಂಡಿ, ಸುನೀಲ್, ಸಿಬ್ಬಂದಿ ಅಮರೇಶ ಬಾವಿಕಟ್ಟಿ, ಪ್ರಮುಖರಾದ ಸುದರ್ಶನರೆಡ್ಡಿ, ಬಿ.ವಿ.ಜೋಷಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net