ಬೀರಲಿಂಗೇಶ್ವರ ಕಲಶ ಮೆರವಣಿಗೆ ಅದ್ದೂರಿ

ಹನುಮಸಾಗರದಲ್ಲಿ ಮಂಗಳವಾರ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ನೂತನ ಕಲಶ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು. ಹಾಲುಮತ ಸಮುದಾಯದ ಸ್ಥಳೀಯ ಅಧ್ಯಕ್ಷ ಭರಮಪ್ಪ ಬಿಂಗಿ, ಮುಖಂಡರಾದ ಬಸವರಾಜ ಹಳ್ಳೂರ, ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ಕನ್ನೂರ, ನಾಗರಾಜ ಹಕ್ಕಿ, ಹನುಮಂತಪ್ಪ ಬಿಂಗಿ, ಸಕ್ರಪ್ಪ ಬಿಂಗಿ, ಭವಾನಿಸಾ ಪಾಟೀಲ್ ಇತರರಿದ್ದರು.

Published on
ಹನುಮಸಾಗರ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಂಗಳವಾರ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ನೂತನ ಕಲಶ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನಕ್ಕೆ ನೂತನ ಕಲಶ ದಾನ ಮಾಡಿದ ವೀರಪ್ಪ ಪತ್ತಾರ ಅವರ ಮನೆಯಿಂದ ಡೊಳ್ಳು ಕುಣಿತ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಪಟ್ಟಣದ ಹೊಸ ಬಸ್ ನಿಲ್ದಾಣ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಬನಶಂಕರಿ ದೇವಸ್ಥಾನ ಮಾರ್ಗವಾಗಿ ಕಲಶ ಮೆರವಣಿಗೆ ನಡೆಯಿತು. ಬುಧವಾರ ಬ್ರಾಹ್ಮೀ ಮುಹೂರ್ತದಲ್ಲಿ ಹೋಮ, ಹವನ, ಪಂಚಾಮೃತ ಅಭಿಷೇಕ, ನೈವೇದ್ಯ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕಲಶಾರೋಹಣ ನೆರವೇರಿಸಲಾಯಿತು.
ಹಾಲುಮತ ಸಮುದಾಯದ ಸ್ಥಳೀಯ ಅಧ್ಯಕ್ಷ ಭರಮಪ್ಪ ಬಿಂಗಿ, ಮುಖಂಡರಾದ ಬಸವರಾಜ ಹಳ್ಳೂರ, ಮಹಾಂತೇಶ ಅಗಸಿಮುಂದಿನ, ವಿಶ್ವನಾಥ ಕನ್ನೂರ, ನಾಗರಾಜ ಹಕ್ಕಿ, ಹನುಮಂತಪ್ಪ ಬಿಂಗಿ, ಸಕ್ರಪ್ಪ ಬಿಂಗಿ, ಭವಾನಿಸಾ ಪಾಟೀಲ್, ವಿಶ್ವನಾಥ ನಾಗೂರ, ದ್ಯಾಮಣ್ಣ ಬಿಂಗಿ, ವೀರಪ್ಪ ಪತ್ತಾರ, ಮುತ್ತು ಪತ್ತಾರ, ಈರಪ್ಪ ಗಡೇಕಾರ, ನಾಗರಾಜ ಸೇಬಿನಕಟ್ಟಿ, ಚನ್ನಬಸಪ್ಪ ಹಕ್ಕಿ, ಹುಲ್ಲಪ್ಪ ಗಡೇಕಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net