ಕೃಷಿಕ ಸಮಾಜ ಸಂಘಟನೆಗೆ ಕೈಜೋಡಿಸಿ

ಯಲಬುರ್ಗಾ ತಾಪಂ ಕಚೇರಿಯಲ್ಲಿ ರೈತರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಿಸಾನ್ ಗೋಷ್ಠಿಯನ್ನು ಉದ್ಘಾಟಿಸಲಾಯಿತು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರೇವಣಪ್ಪ ಸಂಗಟಿ, ಪ್ರಮುಖರಾದ ಬಸಯ್ಯ ಮಠದ, ರುದ್ರಪ್ಪ ಗೆದಗೇರಿ, ಸಂಗಣ್ಣ ತೆಂಗಿನಕಾಯಿ, ರುದ್ರಪ್ಪ ಕೊಪ್ಪದ, ಶಿವಣ್ಣ ಬಂಡಿಹಾಳ, ಕೃಷಿ ಕಾರ್ಮಿಕ ರೈತ ಸಂಘದ ಅಧ್ಯಕ್ಷ ನೀಲಪ್ಪ ಐನಕ್ಕಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು
  • ಅಧ್ಯಕ್ಷ
  • ಮನವಿ
ಯಲಬುರ್ಗಾ: ರೈತರು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರೇವಣಪ್ಪ ಸಂಗಟಿ ಹೇಳಿದರು.
ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ತಾಲೂಕು ಕೃಷಿಕ ಸಮಾಜ ಸಹಯೋಗದಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಿಸಾನ್ ಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಶೆ.70 ರೈತರು ಕೃಷಿ ಅವಲಂಬಿಸಿದ್ದಾರೆ. ರೈತರಿಗೆ ಕೃಷಿ ಇಲ್ಲದೆ ಬೇರೆ ಬದುಕಿಲ್ಲ. ಸಾವಯವ ಕೃಷಿಗೆ ಹೆಚ್ಚು ಆದ್ಯತೆ ನೀಡಬೇಕು. ತಾಲೂಕು ಕೃಷಿಕ ಸಮಾಜದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಗೆ ಸಂಚರಿಸಿ ಆಸಕ್ತರಿಗೆ ಸದಸ್ಯತ್ವ ನೀಡಲಾಗುವುದು. ಸಾವಯವ ಕೃಷಿ ಹಾಗೂ ಇಳುವರಿ ಹೆಚ್ಚಿಸುವ ದೃಷ್ಟಿಯಿಂದ ರೈತರನ್ನು ಜಾಗೃತಿ ಮಾಡಲು ಕನ್ನೇರಿ ಮಠದ ಶ್ರೀಗಳನ್ನು ಆಹ್ವಾನಿಸಿ ರೈತ ಸಮಾವೇಶ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಮಾತನಾಡಿ, ಭೂಮಿಯ ಫಲವತ್ತತೆ ಕಾಪಾಡುವುದರಿಂದ ಯಾವುದೇ ಬೆಳೆ ಬೆಳೆದರೂ ಹೆಚ್ಚು ಇಳುವರಿ ಕೊಡಲು ಸಹಕಾರಿಯಾಗುತ್ತದೆ. ಕೃಷಿ ಚಟುವಟಿಕೆಗಳಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದರು.
ಮಲ್ಲಿಕಾರ್ಜುನ ಸಜ್ಜನ, ಗವಿಸಿದ್ದಪ್ಪ ಐನಕ್ಕಿ, ಬಸಯ್ಯಸ್ವಾಮಿ ಮಲ್ಲಾಪುರಮಠ, ಮುಕುಂದ ಅಮೀನಗಡ, ಶಿವಪ್ಪ ಬಂಡಿಹಾಳ, ಕೃಷಿ ಅಧಿಕಾರಿಗಳಾದ ಎಸ್.ಸಿ.ಚಿಂಚಲಿ, ಶಿವಪ್ಪ ಕೊಂಡಗುರಿ, ಹನುಮರಡ್ಡಿ ಅಬ್ಬಿಗೇರಿ, ಕಳಕಪ್ಪ, ಬೆಳೆ ವಿಮೆ ಕಂಪನಿಯ ಕಳಕಪ್ಪ, ರಾಘವೇಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net