ಸಂಘಟನೆ ಬಲಿಷ್ಠಗೊಳಿಸಲು ಕೈಜೋಡಿಸಿ

ಗಂಗಾವತಿ ನೀಲಕಂಠೇಶ್ವರ ವೃತ್ತದ ಬಳಿಯ ಶ್ರೀ ಕೃಷ್ಣ ಸಭಾಂಗಣದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದಿಂದ ಹಮ್ಮಿಕೊಂಡ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಿ, ನೇಮಕ ಪತ್ರ ವಿತರಿಸಲಾಯಿತು. ರಾಜ್ಯಾಧ್ಯಕ್ಷ ವಿಜಯಜಾಧವ್, ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣ ನಾಯ್ಕ, ಶ್ರೀಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ  ಪಾಂಡು ನಾಯ್ಕ, ಪ್ರಮುಖರಾದ ವೆಂಕಟೇಶ ಚವ್ಹಾಣ, ಹನುಮಂತ ಜಾಧವ ಇತರರಿದ್ದರು.

Published on
ಗಂಗಾವತಿ: ನಗರದ ನೀಲಕಂಠೇಶ್ವರ ವೃತ್ತದ ಬಳಿಯ ಶ್ರೀ ಕೃಷ್ಣ ಸಭಾಂಗಣದಲ್ಲಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಸಂಘದ ರಾಜ್ಯಾಧ್ಯಕ್ಷ ವಿಜಯ್ ಜಾಧವ್ ನೇತೃತ್ವದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಂಘಟನೆ, ಹೋರಾಟ ಮತ್ತು ಸಮಾಜ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲಾಯಿತು. ಸಂಘಟನಾತ್ಮಕವಾಗಿ ಹಕ್ಕುಗಳನ್ನು ಪಡೆಯಬೇಕಿದ್ದು, ಸಂಘಟನೆ ಬಲಿಷ್ಠಗೊಳಿಸುವಂತೆ ಸಲಹೆ ನೀಡಿದರು. ನಂತರ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಕೃಷ್ಣ ನಾಯ್ಕ (ಅಧ್ಯಕ್ಷ), ಯುವ ಘಟಕಕ್ಕೆ ಅಂಬರೀಶ ವಿ.ಚವ್ಹಾಣ (ಅಧ್ಯಕ್ಷ)ರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ, ನೇಮಕ ಪತ್ರ ವಿತರಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣ ನಾಯ್ಕ, ಶ್ರೀಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪಾಂಡು ನಾಯ್ಕ, ಪ್ರಮುಖರಾದ ವೆಂಕಟೇಶ ಚವ್ಹಾಣ, ಹನುಮಂತ ಜಾಧವ, ರವಿಚಂದ್ರ, ರವಿ, ಕಷ್ಣ ನಾಯ್ಕ, ವೆಂಕಟೇಶ್ ಜಾಧವ, ಮಂಜುನಾಥ, ಕೆ.ಆರ್.ಸಂತೋಷ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net