ಕೊಪ್ಪಳದಲ್ಲಿ ಉದ್ಯೋಗಾಕಾಂಗಳ ಪ್ರತಿಭಟನೆ

ಧಾರವಾಡದಲ್ಲಿ ಬಂಧಿಸಿದ ಪ್ರತಿಭಟನಕಾರರನ್ನು ಬಿಡುಗಡೆಗೊಳಿಸಲು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳು ಸೋಮವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರಾದ ಅಣ್ಣಪ್ಪ, ಬಸವರಾಜ, ಆನಂದ, ದೇವೇಂದ್ರಗೌಡ. ಹನುಮೇಶ, ಶರಣು ಗಡ್ಡಿ, ಶಾರದಾ ಇದ್ದರು.
ಧಾರವಾಡದಲ್ಲಿ ಬಂಧಿಸಿದ ಪ್ರತಿಭಟನಕಾರರನ್ನು ಬಿಡುಗಡೆಗೊಳಿಸಲು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳು ಸೋಮವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರಾದ ಅಣ್ಣಪ್ಪ, ಬಸವರಾಜ, ಆನಂದ, ದೇವೇಂದ್ರಗೌಡ. ಹನುಮೇಶ, ಶರಣು ಗಡ್ಡಿ, ಶಾರದಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೋರಾಟಗಾರರ ಬಂಧನ ಸರಿಯಲ್ಲ
  • ಖಾಲಿ ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹ
ಕೊಪ್ಪಳ: ಧಾರವಾಡದಲ್ಲಿ ಹೋರಾಟ ನಿರತ ಉದ್ಯೋಗಾಕಾಂಗಳ ಮೇಲೆ ಲಾಠಿ ಚಾರ್ಜ್​ ನಡೆಸಿ ಬಂಧಿಸಿದ್ದನ್ನು ಖಂಡಿಸಿ ನಗರದ ಕೇಂದ್ರ ಗ್ರಂಥಾಲಯ ಮುಂಭಾಗದಲ್ಲಿ ಸೋಮವಾರ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಭರ್ತಿ ಮಾಡುವ ಕೆಲಸವನ್ನು ಸರ್ಕಾರಗಳು ಮಾಡುತ್ತಿಲ್ಲ. ನಿವೃತ್ತಿ ಬಳಿಕ ಹುದ್ದೆಗಳು ಖಾಲಿ ಉಳಿಯುತ್ತಿವೆ. ನೇಮಕಾತಿಯೂ ಪಾರದರ್ಶಕವಾಗಿ ನಡೆಯುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ಅನಗತ್ಯ ಗೊಂದಲ ಸೃಷ್ಟಿಸಿ ನ್ಯಾಯಾಲಯಕ್ಕೆ ಹೋಗುವಂತೆ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ಧಾರವಾಡದಲ್ಲಿ ಹಮ್ಮಿಕೊಂಡಿದ್ದ ಹೋರಾಟಗಾರರ ಮೇಲೆ ಪೊಲೀಸರು ಲಾಠಿ ಚಾರ್ಜ್​ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಬಂಧಿಸುವ ಮೂಲಕ ಹೋರಾಟ ಹತ್ತಿಕ್ಕಲು ಮುಂದಾಗಿದ್ದಾರೆ. ಇದು ಸರಿಯಾದ ನಡೆಯಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ. ಬಂಧಿಸಿದ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿ. ಅವರ ಮೇಲೆ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಬೇಕು. ಪರವಾನಗಿ ಪಡೆದಿಲ್ಲ ಎಂಬ ನೆಪ ಇಟ್ಟುಕೊಂಡು ದೌರ್ಜನ್ಯ ಎಸಗಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಕಾರರಾದ ಅಣ್ಣಪ್ಪ, ಬಸವರಾಜ, ಆನಂದ, ದೇವೇಂದ್ರಗೌಡ. ಹನುಮೇಶ, ಶರಣು ಗಡ್ಡಿ, ಶಾರದಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net