ಅಧಿಕ ಮಾಸದ ಜ್ಞಾನ ಸತ್ರ ಕುರಿತು ಶಿಕ್ಷಕಿ ಶಕುಂತಲಾ ಕುಲ್ಕರ್ಣಿ ಉಪನ್ಯಾಸ ನೀಡಿದರು. ಶ್ರೀ ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ, ಶಂಗೇರಿಯ ಉಭಯ ಶ್ರೀ ಆದೇಶಾನುಸಾರ 33 ದಿನ ವಿಶೇಷ ಪೂಜೆ, ಅಷ್ಟೋತ್ತರ ಪಾರಾಯಣ ಸೇರಿ ಉಪನ್ಯಾಸ ಜರುಗಿದ್ದು, ವಿವಿಧ ಭಜನಾ ಮಂಡಳಿ ನೆರವಾಗಿವೆ ಎಂದರು. ಪ್ರಮುಖರಾದ ಭೀಮಸೇನ್‌ಭಟ್, ಮಹೇಶ ಭಟ್ ಜೋಶಿ, ರಾಘವೇಂದ್ರ ಅಳವಂಡಿಕರ್, ಶೇಷಗಿರಿ ಗಡಾದ್, ಪ್ರಕಾಶ ಅಳವಂಡಿ, ಶ್ರೀಧರ, ಬಾಲಕಷ್ಣ ದೇಸಾಯಿ, ಅನಿಲ ಅಳವಂಡಿ, ಭೀಮಶಂಕರ, ಪ್ರಹ್ಲಾದ್ ದಿಗ್ಗಾವಿ ಇತರರಿದ್ದರು.