ಬರ ಪರಿಹಾರಕ್ಕೆ ಆಗ್ರಹಿಸಿ ಜೆಡಿಎಸ್​ ಬೃಹತ್​ ಪ್ರತಿಭಟನೆ

ಬರಪರಿಹಾರಕ್ಕೆ ಒತ್ತಾಯಿಸಿ ಜೆಡಿಎಸ್​ ಪದಾಧಿಕಾರಿಗಳು ಬುಧವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಪದಾಧಿಕಾರಿಗಳಾದ ಈಶಪ್ಪ ಮಾದಿನೂರ, ಮೂರ್ತೆಪ್ಪ ಗಿಣಿಗೇರಾ, ಮಲ್ಲನಗೌಡ ಕೋನನಗೌಡ, ವಿರೇಶಗೌಡ್ರ ದಳಪತಿ, ಸುರೇಶ ದದೇಗಲ್​ ಇದ್ದರು.
ಬರಪರಿಹಾರಕ್ಕೆ ಒತ್ತಾಯಿಸಿ ಜೆಡಿಎಸ್​ ಪದಾಧಿಕಾರಿಗಳು ಬುಧವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಪದಾಧಿಕಾರಿಗಳಾದ ಈಶಪ್ಪ ಮಾದಿನೂರ, ಮೂರ್ತೆಪ್ಪ ಗಿಣಿಗೇರಾ, ಮಲ್ಲನಗೌಡ ಕೋನನಗೌಡ, ವಿರೇಶಗೌಡ್ರ ದಳಪತಿ, ಸುರೇಶ ದದೇಗಲ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ದಳಪತಿಗಳ ಆಗ್ರಹ
  • ಬೃಹತ್​ ಪಾದಯಾತ್ರೆ ಮೂಲಕ ಒತ್ತಾಯ
ಕೊಪ್ಪಳ: ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು ತಕ್ಷಣ ಬರ ಘೋಷಿಸಿ ಪರಿಹಾರ ವಿತರಿಸುವಂತೆ ಒತ್ತಾಯಿಸಿ ಜೆಡಿಎಸ್​ ಜಿಲ್ಲಾ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಹಕ್ಕೊತ್ತಾಯ ಮಾಡಿದರು.
ಜೆಡಿಎಸ್​ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ ಮಾತನಾಡಿ, ಈ ವರ್ಷ ತೀವ್ರ ಬರ ಆವರಿಸಿದೆ. ಬಿತ್ತನೆ ಆಗಿಲ್ಲ. ಜಿಲ್ಲೆಯಲ್ಲಿ ಶೇ.47ರಷ್ಟು ಮಳೆಯಾಗಿದೆ. ರೈತರು ಗುಳೆ ಹೊರಟಿದ್ದಾರೆ. ಪರಿಸ್ಥಿತಿ ಬಿಗಡಾಯಿಸಿದರೆ ಆತ್ಮಹತ್ಯೆಗೆ ಯತ್ನಿಸುವ ಸ್ಥಿತಿ ಇದೆ. ದುರಂತ ಆಗುವ ಮೊದಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಬರ ಪೀಡಿತವೆಂದು ಕೊಪ್ಪಳ ಜಿಲ್ಲೆ ಘೋಷಣೆ ಆಗಬೇಕು. ಸರ್ಕಾರ ರೈತರ ಕಷ್ಟ ಕೇಳುತ್ತಿಲ್ಲ. ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​, ಶಾಸಕ ರಾವೇಂದ್ರ ಹಿಟ್ನಾಳ ಎಲ್ಲಿದ್ದಾರೆ ? ಅನ್ನದಾತರು ಸಂಕಷ್ಟದಲ್ಲಿದ್ದಾಗ ನೆರವಾಗದ ಇವರು ಅಧಿಕಾರದಲ್ಲಿ ಯಾಕಿರಬೇಕೆಂದು ಕಿಡಿ ಕಾರಿದರು.
ಜಿಲ್ಲಾ ಗೌರವ ಅಧ್ಯಕ್ಷ ಈಶಪ್ಪ ಮಾದಿನೂರ ಮಾತನಾಡಿ, ಎಕರೆಗೆ 30 ಸಾವಿರ ರೂ. ಪರಿಹಾರ ನೀಡಿ. ಅನುಗ್ರಹ ಯೋಜನೆ ಬಾಕಿ 62 ಕೋಟಿ ರೂ. ಇದ್ದು, 58 ಸಾವಿರ ರೈತರು ವರ್ಷದಿಂದ ಕಾಯುತ್ತಿದ್ದಾರೆ. ತಕ್ಷಣ ಬಾಕಿ ಬಿಡುಗಡೆಗೊಳಿಸಿ. ರೈತರ ಸಾಲ ಮನ್ನಾ ಮಾಡಿ. ಬೆಳೆಗಳು ಒಣಗುತ್ತಿದ್ದು, ಕೃಷಿಗೆ ಆದ ಖರ್ಚು ನೀಡುವಂತೆ ಒತ್ತಾಯಿಸಿದರು.
ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಗಿಣಿಗೇರಾ, ಜಿಲ್ಲಾ ಒಬಿಸಿ ಘಟಕ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ, ದೇವೇಂದ್ರ ಪೂಜಾರ, ಮೆಹಮೂದ್​ ಹುಸೇನಿ ಮಾತನಾಡಿದರು.
ನಗರದ ಗೌರಿ ಶಂಕರ ದೇವಸ್ಥಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಸಾಗಿತು. ಖಾಲಿ ಕೊಡ, ಎತ್ತುಬಂಡಿ, ಬೈಕ್​, ಟ್ರಾ$್ಯಕ್ಟರ್​ ಮೂಲಕ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಪದಾಧಿಕಾರಿಗಳಾದ ವಿರೇಶಗೌಡ್ರ ದಳಪತಿ, ಸುರೇಶ ದದೇಗಲ್​, ಮಲ್ಲಪ್ಪ ಹಂದ್ರಾಳ್​, ಮಂಜುನಾಥ ಸೊರಟೂರ್​, ಮಾರುತಿಗೌಡ ಪೊಲೀಸ್​ ಪಾಟೀಲ್​, ಸಿರಾಜ್​ ಬಿಜಾಪುರ್​, ಶಿವಕುಮಾರ ಏಣಿಗಿ, ಸೋಮನಗೌಡ ಹೊಗರನಾಳ, ನಿಮಾರ್ಲಾ ಮೇದಾರ, ಶರಣಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net