ಗುರು ಸ್ಮರಣೆ ಕಾಯಕ ಅನುಕರಣೀಯ

ಕವಲೂರಿನಲ್ಲಿ ಧಾರ್ಮಿಕ ಮಹಾಸಭೆ ಉದ್ದೇಶಿಸಿ ನಾಡೋಜ ಜ. ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿದರು. ಮರುಳಾರಾಧ್ಯ ಶಿವಾಚಾರ್ಯರು, ಮಹಾದೇವ ಸ್ವಾಮೀಜಿ, ನಾಗಭೂಷಣ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಗ್ರಾಮದ ಮುಖಂಡರಿದ್ದರು.
ಕವಲೂರಿನಲ್ಲಿ ಧಾರ್ಮಿಕ ಮಹಾಸಭೆ ಉದ್ದೇಶಿಸಿ ನಾಡೋಜ ಜ. ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿದರು. ಮರುಳಾರಾಧ್ಯ ಶಿವಾಚಾರ್ಯರು, ಮಹಾದೇವ ಸ್ವಾಮೀಜಿ, ನಾಗಭೂಷಣ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಗ್ರಾಮದ ಮುಖಂಡರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಡೋಜ ಜ. ಅನ್ನದಾನೇಶ್ವರ ಸ್ವಾಮೀಜಿ ಅನಿಸಿಕೆ
  • ಜಂಗಮೋತ್ಸವ-ಧಾರ್ಮಿಕ ಮಹಾಸಭೆ
ಕವಲೂರು: ಎಲ್ಲರೂ ಸರಿಸಮಾನವೆಂದು ಅರಿತುಕೊಂಡು ಜೀವನ ಸಾಗಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮುಂಡರಗಿಯ ನಾಡೋಜ ಜ. ಅನ್ನದಾನೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಗ್ರಾಮದಲ್ಲಿ ಆಯೋಜಿಸಿದ್ದ ಜಂಗಮೋತ್ಸವ ಹಾಗೂ ಧಾರ್ಮಿಕ ಮಹಾಸಭೆಯಲ್ಲಿ ಗುರುವಾರ ಆಶೀರ್ವಚನ ನೀಡಿ, ಮಾತು ಬಾರದ ಗಿಡ, ಮರಗಳು, ಹಣ್ಣು-ಹೂವು, ನೆರಳು ಮುಂತಾದವುಗಳನ್ನು ನೀಡಿ ಉಪಯೋಗಕ್ಕೆ ಬರುತ್ತವೆ. ಬುದ್ಧಿಜೀವಿ ಎನಿಸಿಕೊಂಡ ಮಾನವನು ಸಮಾಜಕ್ಕೆ ಉಪಯೋಗ ಎನಿಸುವ ಕೆಲಸ ಮಾಡಬೇಕು. ಗ್ರಾಮದಲ್ಲಿ ಗುರುವನ್ನು ಸ್ಮರಿಸುವ ಕೆಲಸ ಆಗುತ್ತಿದೆ. ಪಲ್ಲಕ್ಕಿ ಉತ್ಸವ ಜ್ಞಾನ ಚೈತನ್ಯ ತರುತ್ತದೆ. ಶ್ರೀಮಂತಿಕೆ ಶಾಶ್ವತ ಅಲ್ಲ, ಹೃದಯ ಶ್ರೀಮಂತಿಕೆ ದೊಡ್ಡದು. ಸಮಾಜದೊಂದಿಗೆ ಬೆರೆತು ದಾನ, ಧರ್ಮ, ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಿ ಎಂದರು.
ಅಳವಂಡಿಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿ, ಗುರುಗಳು, ಜಂಗಮರನ್ನು ಗೌರವಿಸುವುದರಿಂದ ಮಳೆ, ಬೆಳೆ, ಸುಖ, ಶಾಂತಿ ಸಮೃದ್ಧಿ ನೆಲೆಸಲಿದೆ ಎಂದರು.
ಕುಕನೂರಿನ ಮಹಾದೇವ ಸ್ವಾಮೀಜಿ, ಕಂಪಸಾಗರದ ನಾಗಭೂಷಣ ಸ್ವಾಮೀಜಿ, ಹಿರೇಮಲ್ಲನಕೇರಿಯ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಮುಖರಾದ ಶರಣಪ್ಪ ಸಿದ್ನೆಕೊಪ್ಪ, ತಿಮ್ಮಣ್ಣ ಸಿದ್ನೆಕೊಪ್ಪ, ಹೊನಕೇರಪ್ಪ ಮುಕ್ಕಣ್ಣವರ, ಮಹಾಂತೇಶ ಸಿಂದೋಗಿ, ಅಂದಾನಗೌಡ, ಅಶೋಕ, ಶ್ರೀದುರ್ಗಾದೇವಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net