ಜಕಣಾಚಾರಿ ಕೆತ್ತನೆ ಅಜಾರಮರ

ಯಲಬುರ್ಗಾದಲ್ಲಿ ಜಕಣಾಚಾರಿ ವೃತ್ತದಲ್ಲಿ ಅಮರಶಿಲ್ಪಿ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಪ್ರಕಾಶ ಎಂ.ನಾಶಿ, ಪಪಂ ಮುಖ್ಯಾಧಿಕಾರಿ ಎಚ್.ನಾಗೇಶ, ಸಾಮಾಜಿಕ ಅರಣ್ಯ ವಲಯಾಧಿಕಾರಿ ಬವರಾಜ ಗೋಗೇರಿ, ಆಹಾರ ನಿರೀಕ್ಷಕ ಹನುಮಗೌಡ ಪಾಟೀಲ್, ವಿಶ್ವಕರ್ಮ ಸಮಾಜದ ತಾಲೂಕು ಗೌರವಾಧ್ಯಕ್ಷ ಗುರುಮೂರ್ತಿ ಬಡಿಗೇರ, ಕಾರ್ಯಾಧ್ಯಕ್ಷ ಶರಣಕುಮಾರ ಬಡಿಗೇರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಪ್ರಕಾಶ ಎಂ. ನಾಶಿ ಹೇಳಿಕೆ
  • ಜಕಣಾಚಾರಿ ಜಯಂತಿ ಆಚರಣೆ
ಯಲಬುರ್ಗಾ: ಶಿಲ್ಪಿ ಜಕಣಾಚಾರಿ ಅವರ ಹೆಸರು ಸೂರ್ಯ ಚಂದ್ರ ಇರುವರೆಗೂ ಅಮರ ಎಂದು ತಹಸೀಲ್ದಾರ್ ಪ್ರಕಾಶ ಎಂ. ನಾಶಿ ಹೇಳಿದರು.
ಜಕಣಾಚಾರಿ ಜಯಂತಿ ಅಂಗವಾಗಿ ಪಟ್ಟಣದ ಅಮರಶಿಲ್ಪಿ ಜಕಣಾಚಾರಿ ವೃತ್ತದ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗುರುವಾರ ಮಾತನಾಡಿದರು.
ಕನ್ನಡ ನಾಡಿನ ಇತಿಹಾಸದಲ್ಲಿ ಹೊಯ್ಸಳರು ಶಿಲ್ಪಕಲೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಆ ಕಾಲಘಟ್ಟದಲ್ಲಿ ಅಮರಶಿಲ್ಪಿ ಜಕಣಾಚಾರಿ ಬೇಲೂರು ಮತ್ತು ಹಳೇಬೀಡಿನ ದೇವಾಲಯದಲ್ಲಿ ಶಿಲ್ಪಗಳನ್ನು ಕೆತ್ತನೆ ಮಾಡಿ ಹೆಸರಾಗಿದ್ದಾರೆ. ಒಳ್ಳೆಯ ಕೆಲಸ ಹಾಗೂ ಒಳ್ಳೆಯ ಸೇವೆ ಮಾಡಿದರೆ ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತೇವೆ. ಎಲ್ಲರೊಂದಿಗೆ ಸೌಹಾರ್ದದಿಂದ ಇರಬೇಕು ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಶಂಕ್ರಪ್ಪ ಬಡಿಗೇರ ಮಾತನಾಡಿ, ವಿಶ್ವಕರ್ಮ ಸಮುದಾಯವು ಪಂಚ ಕಸುಬು ಅವಲಂಬಿಸಿದ್ದು, ಇವುಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಹೇಳಿದರು.
ವೃತ್ತದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು ಅಮರಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪಪಂ ಮುಖ್ಯಾಧಿಕಾರಿ ಎಚ್.ನಾಗೇಶ, ಸಾಮಾಜಿಕ ಅರಣ್ಯ ವಲಯಾಧಿಕಾರಿ ಬವರಾಜ ಗೋಗೇರಿ, ಆಹಾರ ನಿರೀಕ್ಷಕ ಹನುಮಗೌಡ ಪಾಟೀಲ್, ತಾಲೂಕು ಸಮಾಜದ ಗೌರವಾಧ್ಯಕ್ಷ ಗುರುಮೂರ್ತಿ ಬಡಿಗೇರ, ಕಾರ್ಯಾಧ್ಯಕ್ಷ ಶರಣಕುಮಾರ ಬಡಿಗೇರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net