ದ್ರಾಕ್ಷಿ ಕಲ್ಲುಕಂಬ ಕದ್ದವರಿಗೆ ಜೈಲು ಶಿಕ್ಷೆ

ದ್ರಾಕ್ಷಿ ಕಲ್ಲುಕಂಬ ಕದ್ದವರಿಗೆ ಜೈಲು ಶಿಕ್ಷೆ
ದ್ರಾಕ್ಷಿ ಕಲ್ಲುಕಂಬ ಕದ್ದವರಿಗೆ ಜೈಲು ಶಿಕ್ಷೆ
Published on

ಪ್ರಮುಖ ಮುಖ್ಯಾಂಶಗಳು

  • ಏಳು ಜನರಿಗೆ ತಲಾ 10 ಸಾವಿರ ರೂ.ದಂಡ
  • ಗಂಗಾವತಿ ನ್ಯಾಯಾಲಯ ಆದೇಶ
ಕೊಪ್ಪಳ: ದ್ರಾಕ್ಷಿ ಕಲ್ಲುಕಂಬ ಕದ್ದ ಏಳು ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿ ಗಂಗಾವತಿ ಪ್ರಧಾನ ಸಿವಿಲ್​ ಮತ್ತು ಜೆಎಂಎ್​ಸಿ ನ್ಯಾಯಾಧೀಶ ನಾಗೇಶ ಪಾಟೀಲ್​ ಬುಧವಾರ ಆದೇಶಿಸಿದ್ದಾರೆ.
ಅರುಣ ಚೌವ್ಹಾಣ, ಗುರಪ್ಪ ಶಿಳ್ಳಿ, ಕೃಷ್ಣಮೂರ್ತಿ, ಚನ್ನಬಸಪ್ಪ ಕೆ., ನಾಗರಾಜ ತಂಗರಾಜ, ಗೋಪಿ, ಕುಮಾರ್​ ಶಿಕ್ಷೆಗೆ ಗುರಿಯಾದವರು.
ಗಂಗಾವತಿ ತಾಲೂಕಿನ ಆನೆಗೊಂದಿ ಸೀಮಾದಲ್ಲಿ ಅನಧಿಕೃತವಾಗಿ ಕಲ್ಲು ಬಂಡೆ ಒಡೆದು ಕಲ್ಲು ಕಂಬ ಮಾಡಲಾಗಿದೆ. ಸರ್ಕಾರಿ ಗುಡ್ಡ ಸರ್ವೇ ನಂ. 193ನಲ್ಲಿ ಗಣಿಗಾರಿಕೆ ಮಾಡಿದ್ದರು. ಲಾರಿಯಲ್ಲಿ ಕಳ್ಳಸಾಗಣೆ ಮಾಡುವಾಗ ಕಂದಾಯ, ಪೊಲೀಸ್​ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದು 2021ರ ಜುಲೈ 24ರಂದು ಪ್ರಕರಣ ದಾಖಲಿಸಿದ್ದರು. 24 ಸಾವಿರ ರೂ. ಮೌಲ್ಯದ 15 ಟನ್​ ಕಲ್ಲುಕಂಬ ಜಪ್ತಿ ಮಾಡಲಾಗಿತ್ತು. ಗಂಗಾವತಿ ಗ್ರಾಮೀಣ ಠಾಣೆ ಪ್ರಕಾಶ ಉಮಚಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳೆಂದು ನಿರ್ಧರಿಸಿದೆ.
ಭಾರತೀಯ ದಂಡ ಸಂಹಿತೆ ಕಲಂ 447 ಅಪರಾಧಕ್ಕೆ 3 ತಿಂಗಳ ಸಾದಾ ಸೆರೆಮನೆವಾಸ ಮತ್ತು ತಲಾ 500 ರೂ. ದಂಡ, ಭಾರತೀಯ ದಂಡ ಸಂಹಿತೆ ಕಲಂ 379 ಅಪರಾಧಕ್ಕೆ 3 ವರ್ಷ ಸೆರೆವಾಸ ಮತ್ತು 10 ಸಾವಿರ ರೂ. ಜುಲ್ಮಾನೆ ವಿಧಿಸಿ ಆದೇಶಿಸಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ನಿರಂಜನಸ್ವಾಮಿ ಡಾ.ದೇವಯ್ಯ ಸ್ವಾಮಿ ಹಿರೇಮಠ ಇವರು ವಾದ ಮಂಡಿಸಿದ್ದರು. ಗಂಗಾವತಿ ಗ್ರಾಮೀಣ ಪೊಲೀಸ್​ ಠಾಣೆ ಸಿಬ್ಬಂದಿ ಶ್ರೀಶೈಲ್​, ವೆಂಕಟೇಶ, ಆಂಜಿನಿ ಸಾಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗಿ ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net