ಕನಕಗಿರಿ: ತಾಲೂಕಿನ ಹಿರೇಮಾದಿನಾಳ ಪ್ರಸನ್ನ ವೀರಾಂಜನೇಯ ಜಾತ್ರೋತ್ಸವದ ನಿಮಿತ್ತ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು.
ಬೆಳಗ್ಗೆ ಕೃಷ್ಣಾಚಾರ್ಯ ರಾಜಪುರೋಹಿತ ಹಾಗೂ ಮಂತ್ರಾಲಯದ ಎಂ.ಜಯಸಿಂಹಾಚಾರ್ ನೇತೃತ್ವದಲ್ಲಿ ರಥಾಂಗ ಹೋಮ ಜರುಗಿತು. ಬಾಲ ಗೋಪಾಲ ದಂಪತಿಗಳಿಂದ ಹೋಮಕ್ಕೆ ಪೂರ್ಣಾಹುತಿ ಸಮರ್ಪಿಸಲಾಯಿತು. ಬಾಲಗೋಪಾಲ ದಾಸರು ರಥೋತ್ಸವಕ್ಕೆ ಚಾಲನೆ ನೀಡಿದರು.
ನಂದಿಕೋಲು, ಡೊಳ್ಳು, ಭಾಜಾ ಭಂಜಂತ್ರಿ ಹಾಗೂ ಛದ್ಮ ವೇಷದಾರಿಗಳ ತಂಡಗಳು ರಥೋತ್ಸವಕ್ಕೆ ವಿಶೇಷ ಮೆರಗು ತಂದವು. ಭಕ್ತರು ಉತ್ತತ್ತಿ, ಹಣ್ಣು ಎಸೆದು ಜೈ ಶ್ರೀರಾಮ ಘೋಷಣೆ ಕೂಗಿ ಭಕ್ತಿ ಸಮರ್ಪಿಸಿದರು.
ಗ್ರಾಮದಲ್ಲಿ ಹಲವು ವರ್ಷಗಳಿಂದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ನಡೆಸುತ್ತಿರುವ ಗೋಪಾಲದಾಸ ಕುಟುಂಬಸ್ಥರನ್ನು ಸನ್ಮಾನಿಸಿ ಸಾರೋಟಿನಲ್ಲಿ ಮೆರವಣಿಗೆ ಮಾಡಿದರು.
ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ವಕೀಲ ಮಾರುತಿ, ಪ್ರಮುಖರಾದ ಮೌನೇಶ ವಿಶ್ವಕರ್ಮ, ಚಿಕ್ಕ ಮಾದಿನಾಳ, ಅಗೋಲಿ, ವಿಠಲಾಪುರ, ನಾಗಲಾಪುರ, ರಾಮದುರ್ಗ, ಬಂಕಾಪುರ, ಸುತ್ತಲಿನ ಗ್ರಾಮಸ್ಥರು ಇದ್ದರು.