ಶುದ್ಧ ಕುಡಿವ ನೀರು ಒದಗಿಸುವುದು ಆಡಳಿತದ ಕರ್ತವ್ಯ

ತಾವರಗೇರಾ ಸಮೀಪದ ಜುಮಲಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುದ್ಧ ನೀರಿನ ಘಟಕವನ್ನು ಎಸ್ಡಿಎಂಸಿ ಅಧ್ಯಕ್ಷ ಕಲ್ಲಪ್ಪ ಕುರಿ ಉದ್ಘಾಟಿಸಿದರು. ಸಿಎಸ್‌ಆರ್ ಮ್ಯಾನೇಜರ್ ಅಜಿತ್ ಪಾಟೀಲ್, ಎಸ್ಡಿಎಂಸಿ ಸದಸ್ಯ ಹನುಮಪ್ಪ ಕುರ್ನಾಳ್, ಮುಖ್ಯಶಿಕ್ಷಕ ಸೋಮನಗೌಡ ಪಾಟೀಲ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಆಡಳಿತ
  • ಕರ್ತವ್ಯ

ಶುದ್ಧ ಕುಡಿವ ನೀರು ಒದಗಿಸುವುದು ಆಡಳಿತದ ಕರ್ತವ್ಯ

ತಾವರಗೇರಾ: ಮಕ್ಕಳ ವಿದ್ಯಾಭ್ಯಾಸದ ಜತೆ ಶುದ್ಧ ಕುಡಿವ ನೀರು ಒದಗಿಸುವುದು ನಮ್ಮ ಕರ್ತವ್ಯ ಎಂದು ಎಸ್ಡಿಎಂಸಿ ಅಧ್ಯಕ್ಷ ಕಲ್ಲಪ್ಪ ಕುರಿ ಹೇಳಿದರು.
ಸಮೀಪದ ಜುಮಲಾಪೂರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮ ಹಾಗೂ ಸುಜಲಾನ್ ಕಂಪನಿಯಿಂದ ಒದಗಿಸಿದ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

ಸಿಎಸ್‌ಆರ್ ಮ್ಯಾನೇಜರ್ ಅಜಿತ್ ಪಾಟೀಲ್ ಮಾತನಾಡಿ, ಗುಬ್ಬಚ್ಚಿ ಗೂಡು ನಿರ್ಮಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ ಗುಬ್ಬಚ್ಚಿಗಳ ರಕ್ಷಿಸುವುದರಿಂದ ಪರಿಸರ ಸಮತೋಲನಕ್ಕೆ ಸಹಕಾರಿ ಆಗಲಿದೆ ಎಂದು ತಿಳಿಸಿದರು.
ಎಸ್ಡಿಎಂಸಿ ಸದಸ್ಯ ಹನುಮಪ್ಪ ಕುರ್ನಾಳ್, ಮುಖ್ಯಶಿಕ್ಷಕ ಸೋಮನಗೌಡ ಪಾಟೀಲ್, ಶಿಕ್ಷಕರಾದ ಅಕ್ಕಮಹಾದೇವಿ, ಶ್ರೀದೇವಿ, ಎಲ್ಲಮ್ಮ, ದೊಡ್ಡಬಸಪ್ಪ, ಭೋಗೇಶ, ಚಂದ್ರಶೇಖರ್ ಶಿಕ್ಷಕರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net