ಅನುದಾನ ವಾಪಸ್​ ಪಡೆದಿದ್ದು ನಾಚಿಕೆಗೇಡು

ಡಾ.ಬಸವರಾಜ ಕ್ಯಾವಟರ್​.
ಡಾ.ಬಸವರಾಜ ಕ್ಯಾವಟರ್​.
Published on
ಕೊಪ್ಪಳ : ರಾಜ್ಯ ಸರ್ಕಾರ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ ಬದಲಾವಣೆಗೆ ನೀಡಿದ್ದ 10 ಕೋಟಿ ರೂ. ಅನುದಾನ ವಾಪಸ್​ ಪಡೆದಿದ್ದು ನಾಚಿಕೆಗೇಡಿನ ಕೆಲಸವೆಂದು ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ಕಿಡಿಕಾರಿದ್ದಾರೆ.
ಇದರಿಂದ ಗೇಟ್​ ಅಳವಡಿಕೆ ವಿಳಂಬವಾಗಲಿದೆ. ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುವುದು ಸರಿಯಲ್ಲ. ತಜ್ಞ ಕನ್ನಯ್ಯ ನಾಯ್ಡು ಗೇಟ್​ ಪರಿಶೀಲನೆಗೆ ಆಗಮಿಸಿದಾಗ ವಿಷಯ ಬಹಿರಂಗಗೊಂಡಿದೆ. ಗುತ್ತಿಗೆದಾರರಿಗೆ ಸಮಸ್ಯೆ ಮಾಡಿದ್ದು, ಕಾಮಗಾರಿ ಆಮೆ ವೇಗದಲ್ಲಿದೆ. ಜೂನ್​ ತಿಂಗಳ ಒಳಗಾಗಿ 33 ಕ್ರೆಸ್ಟ್​ ಗೇಟ್​ ಬದಲಾಯಿಸಲು ಸಾಧ್ಯವಿಲ್ಲ. ಈಗಾಗಲೇ ಎರಡನೇ ಬೆಳೆಗೆ ನೀರಿಲ್ಲದೇ ರೈತರು ಕಂಗಾಲಾಗಿದ್ದು ಮತ್ತಷ್ಟು ಸಮಸ್ಯೆ ಅನುಭವಿಸಬೇಕಾಗಲಿದೆ. ಜೂನ್​ ಒಳಗೆ ಕಾಮಗಾರಿ ಮುಗಿಯದಿದ್ದರೆ ಹೇಗೆಂಬ ಆತಂಕ ಮನೆ ಮಾಡಿದೆ. ಆಂಧ್ರ ಸರ್ಕಾರ ತನ್ನ ಪಾಲಿನ 35 ಕೋಟಿ ರೂ. ನೀಡಿದ್ದು ಸ್ವಾಗತಾಗರ್ಹ. ನೆರೆರಾಜ್ಯಕ್ಕೆ ಇರುವ ಕಾಳಜಿ ನಮ್ಮ ಸರ್ಕಾರಕ್ಕೆ ಇಲ್ಲದಿರುವುದು ದುರ್ದೈವ. ಸರ್ಕಾರ ದಿವಾಳಿ ಆಗಿದೆ ಎಂಬುದಕ್ಕೆ ಇದೇ ಸಾ. ಕೂಡಲೇ ಅನುದಾನ ಒದಗಿಸಬೇಕು. ಇಲ್ಲದಿದ್ದಲ್ಲಿ ಹೋರಾಟಕ್ಕಿಳಿಯುವುದಾಗಿ ಎಚ್ಚರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net