ಕೆರೆ ತುಂಬಿಸುವ ಮೂಲಕ ನೀರಾವರಿ ಸೌಲಭ್ಯ

ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಗುರುವಾರ ಕೆರೆ ತುಂಬಿಸುವ ಯೋಜನೆ ಕಾಮಗಾರಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಭೂಮಿಪೂಜೆ ನೆರವೇರಿಸಿದರು. ಪ್ರಮುಖರಾದ ವಿರುಪಾಕ್ಷಪ್ಪ ಸಿಂಗನಾಳ, ಡಿ.ಕೆ.ಆಗೋಲಿ, ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ಚನ್ನಪ ಮಳಗಿ ಇದ್ದರು.
ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಾಳ ಗ್ರಾಮದಲ್ಲಿ ಗುರುವಾರ ಕೆರೆ ತುಂಬಿಸುವ ಯೋಜನೆ ಕಾಮಗಾರಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಭೂಮಿಪೂಜೆ ನೆರವೇರಿಸಿದರು. ಪ್ರಮುಖರಾದ ವಿರುಪಾಕ್ಷಪ್ಪ ಸಿಂಗನಾಳ, ಡಿ.ಕೆ.ಆಗೋಲಿ, ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ಚನ್ನಪ ಮಳಗಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜನಾರ್ದನ ರೆಡ್ಡಿ ಹೇಳಿಕೆ
  • ಕಾಮಗಾರಿಗೆ ಭೂಮಿ ಪೂಜೆ
ಕೊಪ್ಪಳ : ಗಂಗಾವತಿ ವಿಧಾನಸಭಾ ಕ್ಷೇತ್ರ ಜನರ ಬಹುದಿನದ ಕನಸಾಗಿದ್ದ ಕೆರೆ ತುಂಬಿಸುವ ಯೋಜನೆ ಕಾಮಗಾರಿಗೆ ಇಂದು ಅಡಿಗಲ್ಲು ನೆರವೇರಿಸಲಾಗಿದೆ. 28 ಕೆರೆಗಳು ತುಂಬಲಿದ್ದು ಅಂತರ್ಜಲ ಅಭಿವೃದ್ಧಿ, ಕುಡಿವ ನೀರು, ಕೃಷಿ ಚಟುವಟಿಕೆಗಳಿಗೆ ನೆರವಾಗಲಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ತಾಲೂಕಿನ ಚಿಕ್ಕ ಬೊಮ್ಮನಾಳ ಗ್ರಾಮದಲ್ಲಿ ಗುರುವಾರ ಕೆರೆ ತುಂಬಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
153.76 ಕೋಟಿ ರೂ. ಮೊತ್ತದಲ್ಲಿ 28 ಕೆರೆಗಳಿಗೆ ಪೈಪ್​ಲೈನ್​ ಮೂಲಕ ನೀರು ತುಂಬಿಸಲಾಗುವುದು. ಉಡಮಕಲ್​, ಆಗೋಲಿ, ಹಂಪಸದುರ್ಗ, ಗಡ್ಡಿ, ಹೇಮಗುಡ್ಡ, ಮಲಕನಮರಡಿ, ಭಟ್ಟರನರಸಾಪುರ, ಚಿಕ್ಕಬೊಮ್ಮನಾಳ, ಚಳ್ಳಾರಿ, ಹೊಸೂರು, ಹಾಸಗಲ್​, ಕೊಡದಾಳ, ಹಿರೇಸೂಳಿಕೇರಿ, ದನಕನದೊಡ್ಡಿ&1, ದನಕನದೊಡ್ಡಿ&2, ಹಾಲಹಳ್ಳಿ, ಸಂಗಾಪುರ, ಕಲ್​ ತಾವರಗೇರ, ಭೀಮನೂರು, ಕೂಕನಪಳ್ಳಿ, ಇಂದರಗಿ&1, ಇಂದರಗಿ&2, ವನಬಳ್ಳಾರಿ, ಬೂದಗುಂಪ, ಹೊಸಹಳ್ಳಿ, ನಾಗೇಶನಹಳ್ಳಿ, ಜಬ್ಬಲಗುಡ್ಡ ಮತ್ತು ನೀರ್​ಕೊಳ ಕೆರೆಗಳು ಯೋಜನೆ ವ್ಯಾಪ್ತಿಗೆ ಬರಲಿವೆ ಎಂದರು.
ಕೆರೆ ವ್ಯಾಪ್ತಿ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾ ಹೆಚ್ಚಲಿದೆ. ರೈತರ ಕೃಷಿ ಚಟುವಟಿಕೆಗೆ ನೀರು ಸಿಗಲಿದೆ. ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿದೆ. ಕುಡಿವ ನೀರಿಗೆ ಶಾಶ್ವತ ಪರಿಹಾರ ದೊರೆಯಲಿದೆ. ಯೋಜನೆಯಿಂದ ಗಂಗಾವತಿ ಕ್ಷೇತ್ರದ ಗ್ರಾಮೀಣ ಭಾಗ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರಮುಖರಾದ ವಿರುಪಾಕ್ಷಪ್ಪ ಸಿಂಗನಾಳ, ಡಿ.ಕೆ.ಆಗೋಲಿ, ಮನೋಹರಗೌಡ ಹೇರೂರು, ಯಮನೂರು ಚೌಡ್ಕಿ, ಚನ್ನಪ ಮಳಗಿ, ಆನಂದ್​ ಗೌಡ, ಚನ್ನವಿರನ ಗೌಡ, ಸಂಗಮೇಶ್​ ಬಾದವಾಡಗಿ, ಮಲ್ಲೇಶಪ್ಪ, ವಿಶ್ವನಾಥ್​ ಮಾಲಿ ಪಾಟೀಲ್​, ಮಹಾಂತೇಶ್​ ಸಂಗಟಿ, ಮಂಜುನಾಥ್​ ಗೊಂದಿ, ವಿರುಪಾಕ್ಷಿ ಹೇರೂರು, ಅರ್ಜುನ್​ ನಾಯಕ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net