ಬಳಿಕ ಆಕ್ರೋಶಗೊಂಡಿದ್ದ ಅಧ್ಯಕ್ಷೆಯ ಪತಿ, ಬೆಂಬಲಿಗರು ಸಂಜೆ ಸದಸ್ಯ ಅನಿಲ್ ಕುಮಾರ ಬಿಜ್ಜಳ ಅವರ ಔಷಧ ಅಂಗಡಿಗೆ ತೆರಳಿ ಭಿನ್ನಾಭಿಪ್ರಾಯಕ್ಕೆ ಕಾರಣ ಕೇಳುವ ನೆಪದಲ್ಲಿ ವಾಗ್ವಾದ ನಡೆದಿದ್ದು, ಹಲ್ಲೆಯವರೆಗೂ ಮುಂದುವರಿಯಿತು. ಮುಖಂಡರು ಜಗಳ ಬಿಡಿಸಲು ಮುಂದಾದರೂ ಬಿಜ್ಜಳ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತೆರಳಿದ ಪತ್ರಕರ್ತರು ಫೋಟೋ, ವಿಡಿಯೋ ತೆಗೆಯುವಾಗ ಪತ್ರಕರ್ತರನ್ನು ಎಳೆದಾಡಿ ಹಲ್ಲೆ ಮಾಡಿದ್ದಾರೆ. ಮೊಬೈಲ್ ಕಸಿದು ವಿಡಿಯೋ ಡಿಲಿಟ್ ಮಾಡಿದ್ದಾರೆ.