ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಅಂಕಗಳಿಸಿದರೆ ಬಹುಮಾನ

ಕನಕಗಿರಿ ಆದರ್ಶ ಶಾಲೆಯ ಮಕ್ಕಳೊಂದಿಗೆ ಸಚಿವ ಶಿವರಾಜ ತಂಗಡಗಿ ಗುರುವಾರ ಸಂವಾದ ನಡೆಸಿದರು. ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನೂರು ಉಪ್ಪು, ಸದಸ್ಯರಾದ ವೀರೇಶ ಕಡಿ ಇತರರಿದ್ದರು.
ಕನಕಗಿರಿ ಆದರ್ಶ ಶಾಲೆಯ ಮಕ್ಕಳೊಂದಿಗೆ ಸಚಿವ ಶಿವರಾಜ ತಂಗಡಗಿ ಗುರುವಾರ ಸಂವಾದ ನಡೆಸಿದರು. ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನೂರು ಉಪ್ಪು, ಸದಸ್ಯರಾದ ವೀರೇಶ ಕಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಶಿವರಾಜ ತಂಗಡಗಿ ಘೋಷಣೆ
  • ವಿದ್ಯಾರ್ಥಿಗಳೊಂದಿಗೆ ಸಂವಾದ
ಕನಕಗಿರಿ: ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಜತೆಗೆ ವಿಶೇಷ ಬಹುಮಾನ ನೀಡಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಘೋಷಿಸಿದರು.
ಇಲ್ಲಿನ ಆದರ್ಶ ಶಾಲೆಗೆ ಮಂಗಳವಾರ ದಿಢೀರ್ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ವಿದ್ಯಾರ್ಥಿ ಬದುಕು ಬಂಗಾರದಂತದ್ದು. ಉತ್ತಮವಾಗಿ ಓದಿ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಿಲ್ಲದ ಬಗ್ಗೆ ಮಕ್ಕಳು ಮಂತ್ರಿಗಳ ಗಮನಕ್ಕೆ ತಂದರು. ಶಿಕ್ಷಕರನ್ನು ಒದಗಿಸುವ ಭರವಸೆಯನ್ನು ಸಚಿವರು ನೀಡಿದರು. ಮಕ್ಕಳ ಸುರಕ್ಷತೆಗೆ ಶಾಲೆ ಸುತ್ತಲೂ ಕಾಂಪೌಂಡ್ ನಿರ್ಮಿಸಿಕೊಡಬೇಕೆಂದು ಎಸ್‌ಡಿಎಂಸಿ ಪದಾಧಿಕಾರಿಗಳು ಮನವಿ ಮಾಡಿದರು.
ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನೂರು ಉಪ್ಪು, ಸದಸ್ಯರಾದ ವೀರೇಶ ಕಡಿ, ಬೀರಪ್ಪ, ಪ್ರಮುಖರಾದ ನಾಗಪ್ಪ ಹುಗ್ಗಿ, ಗಂಗಾಧರಸ್ವಾಮಿ ಕೆ. ಇತರರಿದ್ದರು.
ವಿದ್ಯಾರ್ಥಿಗಳು ನಮ್ಮ ಕಂಪನಿನಾ?
ಸಂವಾದದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಎಷ್ಟು ಮಕ್ಕಳಿದ್ದೀರಿ? ಎಂದು ಸಚಿವರು ಪ್ರಶ್ನಿಸಿದಾಗ ಕೆಳಗಿದ್ದ ವಿದ್ಯಾರ್ಥಿನಿಯರು ಕೈ ಎತ್ತಿದ್ದರೆ, ಮೊದಲ ಅಂತಸ್ತಿನಿಂದ ಗಂಡು ಮಕ್ಕಳು ಕೈ ಎತ್ತಿದರು. ಹೋ ಗಂಡು ಮಕ್ಕಳು. ನಮ್ಮ ಕಂಪನಿನಾ? ಏನು ವಿಶ್ವನಾಥ (ತಹಸೀಲ್ದಾರ್) ಕಂಪನಿನಾ? ಎಂದು ಪ್ರಶ್ನಿಸಿದರು. ಸಚಿವರ ಮಾತು ಯಾರಿಗೂ ಅರ್ಥವಾಗದಿದ್ದಾಗ ಕೊನೆಗೆ ನಮ್ ಕಂಪನಿ ಎಂದರೆ ರಾಜಕಾರಣ, ವಿಶ್ವನಾಥ ಕಂಪನಿ ಎಂದರೆ ಉನ್ನತ ಹುದ್ದೆ ಅಲಂಕರಿಸುವುದು ಎಂದು ನಗೆ ಚಟಾಕಿ ಹಾರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net