ಕವಲೂರಿನಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಭಿತ್ತಿ ಪತ್ರ ಪ್ರದರ್ಶಿಸಲಾಯಿತು. ಆತ್ಮ ಯೋಜನೆಯ ತಾಂತ್ರಿಕ ಸಹಾಯಕಿ ತಾರಾ, ಪ್ರಮುಖರಾದ ಸುರೇಶ ವಾಸ್ತೆ, ಧರ್ಮಣ್ಣ, ಹನುಮಂತ, ಭೂದೇಶ, ಸಂಶುದ್ದೀನ್ ಷಾ, ಹನುಮಂತ ಇದ್ದರು.
ಕವಲೂರು: ಬೆಳೆ ನಷ್ಟದಿಂದ ರಕ್ಷಣೆ ಪಡೆಯಲು ಕೊನೆಯ ದಿನಾಂಕದ ಒಳಗೆ ಬೆಳೆವಿಮೆ ಮಾಡಿಸಿ ಎಂದು ಆತ್ಮ ಯೋಜನೆಯ ತಾಂತ್ರಿಕ ಸಹಾಯಕಿ ತಾರ ಮನವಿ ಮಾಡಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ಬೆಳೆವಿಮೆ) ಯೋಜನೆಯ ಮುಂಗಾರು ಹಂಗಾಮಿನ ಮಾಹಿತಿ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಪ್ರಕೃತಿ ವಿಕೋಪ, ಅಕಾಲಿಕ ಮಳೆ ಅಥವಾ ಬರಗಾಲದಿಂದ ಬೆಳೆ ನಷ್ಟಕ್ಕೆ ಆರ್ಥಿಕ ರಕ್ಷಣೆ ಪಡೆಯಲು ಬೆಳೆ ಸಾಲ ಇರುವ ಅಥವಾ ಉಳಿತಾಯ ಖಾತೆ ಹೊಂದಿರುವ ರಾಷ್ಟ್ರೀಕೃತ ಅಥವಾ ಸಹಕಾರಿ ಬ್ಯಾಂಕ್‌ಗಳ ಮೂಲಕ ಬೆಳೆವಿಮೆಗೆ ಪ್ರೀಮಿಯಂ ಪಾವತಿಸಿ. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ತಿಳಿಸಿದರು.